ಜೈಪುರ ಪೆಟ್ರೋಲ್ ಬಂಕ್ ಬಳಿ ಅಗ್ನಿ ಅವಘಡ, ಐವರು ಸಜೀವ ದಹನ, 20 ಮಂದಿಗೆ ಗಾಯ

ಜೈಪುರ ಪೆಟ್ರೋಲ್ ಬಂಕ್ ಬಳಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಈ ಅವಘಡದಲ್ಲಿ ಐವರು ಸಜೀವ ದಹನವಾಗಿದ್ದು 20 ಮಂದಿ ಗಾಯಗೊಂಡಿದ್ದಾರೆ

- - - - - - - - - - - - - Story - - - - - - - - - - - - -
  • ಜೈಪುರ ಪೆಟ್ರೋಲ್ ಬಂಕ್‌ ಬಳಿ ಭೀಕರ ಅಗ್ನಿ ಅವಘಡ.
  • ಸಿಎನ್ ಜಿ ಟ್ಯಾಂಕರ್‌ಗೆ ಬೆಂಕಿ ತಗುಲಿ ಸುಮಾರು 40 ವಾಹನಗಳು ಬೆಂಕಿಗಾಹುತಿ.
  • ಅಗ್ನಿಶಾಮಕ ದಳ 22 ವಾಹನಗಳೊಂದಿಗೆ ಬೆಂಕಿ ನಂದಿಸಲು ಯಶಸ್ವಿ.

ಜೈಪುರ (Jaipur): ರಾಜಸ್ಥಾನದ ಪೆಟ್ರೋಲ್ ಬಂಕ್ ಬಳಿ (Petrol Pump) ಭೀಕರ ಅಗ್ನಿ ಅವಘಡ (Fire Accident) ಸಂಭವಿಸಿದೆ. ಪೆಟ್ರೋಲ್ ಬಂಕ್ ಹೊರಗೆ ಸಿಎನ್ ಜಿ ಟ್ಯಾಂಕರ್ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ ಐವರು ಸಜೀವ ದಹನವಾಗಿದ್ದು 20 ಮಂದಿ ಗಾಯಗೊಂಡಿದ್ದಾರೆ.

ವಿವರಗಳ ಪ್ರಕಾರ, ರಾಜಸ್ಥಾನದ ರಾಜಧಾನಿ ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ ಬಳಿ ಶುಕ್ರವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಪೆಟ್ರೋಲ್ ಬಂಕ್ ನಲ್ಲಿ ನಿಲ್ಲಿಸಿದ್ದ ಸಿಎನ್ ಜಿ ಟ್ಯಾಂಕರ್ ಗೆ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ನಿಂದ ಬೆಂಕಿ ಅಕ್ಕಪಕ್ಕದ ವಾಹನಗಳಿಗೆ ವ್ಯಾಪಿಸಿ ಸುಮಾರು 40 ವಾಹನಗಳು ಸುಟ್ಟು ಕರಕಲಾಗಿವೆ. ಈ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಜೀವ ದಹನವಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.

ಜೈಪುರ ಪೆಟ್ರೋಲ್ ಬಂಕ್ ನಲ್ಲಿ ಅಗ್ನಿ ಅವಘಡ, ಐವರು ಸಜೀವ ದಹನ, 20 ಮಂದಿಗೆ ಗಾಯ

ಸ್ಥಳದಲ್ಲಿ 22 ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿ ನಂದಿಸಲಾಯಿತು. ಅಗ್ನಿ ಅವಘಡದಿಂದಾಗಿ ಆಕಾಶದಲ್ಲಿ ಕಪ್ಪು ಹೊಗೆ ಆವರಿಸಿದ್ದು, ಪಕ್ಕದ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲದೇ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Horrific Fire Accident at Rajasthan Jaipur Petrol Pump, 5 Dead and 20 Injured

English Summary
Related Stories