#MenToo: ಪತ್ನಿ ಕಿರುಕುಳಕ್ಕೆ ಬೇಸತ್ತು ಅಪ್ಪ-ಅಮ್ಮನ ಜೊತೆ ಗಂಡ ಸಾವು
ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಒಬ್ಬನೇ ಮಗನ ಸಾವನ್ನು ತಾಳಲಾರದೆ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೇಲಂ: ಅತುಲ್ ಸುಭಾಷ್ ಘಟನೆಯ ನಂತರ, ಇಂತಹ ಪತಿ-ಪತ್ನಿಯರ ಪ್ರಕರಣಗಳು ಒಂದೊಂದಾಗಿ ತೆರೆಗೆ ಬರುತ್ತಿವೆ. ಇತ್ತೀಚೆಗಷ್ಟೇ.. ಪತ್ನಿಯ ಕಿರುಕುಳಕ್ಕೆ ಪತಿಯೊಬ್ಬ ಪೋಷಕರ ಜತೆ ಸೇರಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮದುವೆಯಾದ ಐದು ತಿಂಗಳ ನಂತರ ಪತಿ ಪತ್ನಿ ಪದೇ ಪದೇ ಜಗಳವಾಡುತ್ತಿದ್ದರು ಎನ್ನಲಾಗಿದೆ, ಇದೆ ವಿಚಾರವಾಗಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಒಬ್ಬನೇ ಮಗನ ಸಾವನ್ನು ತಾಳಲಾರದೆ ಪೋಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರುಮಪಟ್ಟಿ ಸಮೀಪದ ಎ.ವಳವಂಡಿ ಗ್ರಾಮದ ಸೆಲ್ವರಾಜ್ (55) ಪೇಂಟರ್ ಮತ್ತು ಅವರ ಪತ್ನಿ ಪೂಂಗೋಡಿ (50) ಕೂಲಿ ಕಾರ್ಮಿಕರು. ಇವರ ಮಗ ಸುರೇಂದ್ರನ್ (28) ಅಡುಗೆ ಕೆಲಸ ಮಾಡುತ್ತಿದ್ದಾನೆ. ಐದು ತಿಂಗಳ ಹಿಂದೆ ವೆಟ್ಟಂಪಾಡಿಯ ಸ್ನೇಹಾ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು.
ಹೀಗಿರುವಾಗ ಸ್ನೇಹಾ ಮದುವೆಯಾದಾಗಿನಿಂದಲೂ ಪತಿಗೆ ಬೇರೆ ಮನೆ ಮಾಡಲು ಒತ್ತಾಯಿಸುತ್ತಿದ್ದಳಂತೆ, ಆದರೆ ಸುರೇಂದ್ರನ್ ಗೆ ಅಪ್ಪ ಅಮ್ಮನ ಬಿಟ್ಟು ಬೇರೆ ಮನೆ ಮಾಡಲು ಇಷ್ಟವಿರಲಿಲ್ಲ, ಈ ವಿಚಾರವಾಗಿ ಗಂಡ-ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅದೇ ರೀತಿ ಶನಿವಾರವೂ ಸುರೇಂದ್ರನ್ ಮತ್ತು ಸ್ನೇಹಾ ನಡುವೆ ಜಗಳ ನಡೆದಿದೆ.
Husband and Parents Die Over Marital Dispute in Tamil Nadu