ಹೆಂಡತಿ ಫೋನ್ಗೆ ಬಂದ ಕಿಸ್ ಎಮೋಜಿ, ಇಬ್ಬರನ್ನೂ ಕಡಿದು ಕೊಂದ ಪತಿ
ಹೆಂಡತಿ ಫೋನಿಗೆ ಬಂದ ಕಿಸ್ ಎಮೋಜಿ ಗಂಡನ ಅನುಮಾನಕ್ಕೆ ಕಾರಣವಾಗಿ ಭೀಕರ ಕೊಲೆ ಕೇರಳದಲ್ಲಿ ನಡೆದಿದೆ. ಶಂಕೆಯಿಂದ ಗಂಡ ಕೊನೆಗೂ ಹೆಂಡತಿ ಹಾಗೂ ಆಕೆಯ ಸ್ನೇಹಿತನನ್ನೂ ಕೊಂದಿದ್ದಾನೆ.

- ಕಿಸ್ ಎಮೋಜಿಯಿಂದ ವಿವಾದ ಕೊಲೆಯ ಮಟ್ಟಕ್ಕೆ
- ಪತ್ನಿ ಮತ್ತು ಆಕೆಯ ಸ್ನೇಹಿತನನ್ನು ಕೊಂದ ಪತಿ
- ಘಟನೆ ಬಳಿಕ ಸ್ನೇಹಿತನಿಗೆ ಕರೆ ಮಾಡಿ ಬಾಯ್ಬಿಟ್ಟ ಪತಿ
ಕೇರಳದ (Kerala) ಪತನಂತಿಟ್ಟ (Pathanamthitta) ಜಿಲ್ಲೆಯ ಕಲಂಜೂರು (Kalanjuru) ಗ್ರಾಮದಲ್ಲಿ ನಡೆದ ಈ ಭೀಕರ ಘಟನೆಯು ಶಂಕೆ ಎಷ್ಟು ಅಪಾಯಕರವೆಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ.
ಶಂಕೆಯೆಂಬ (Doubt) ವಿಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಾಗ ಅದು ಹೇಗೆ ಜೀವಹಾನಿಗೂ ಕಾರಣವಾಗಬಹುದು ಎಂಬುದನ್ನು ಈ ಪ್ರಕರಣ ತೋರಿಸಿದೆ.
ಬೈಜು (30) ಮತ್ತು ವೈಷ್ಣವಿ (28) ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಕಲಂಜೂರಿನಲ್ಲಿ ವಾಸವಾಗಿದ್ದರು. ಇವರ ಪಕ್ಕದ ಮನೆಯಲ್ಲೇ ವಿಷ್ಣು (30) ತಾಯಿಯೊಂದಿಗೆ ವಾಸಿಸುತ್ತಿದ್ದ.
ದೈನಂದಿನ ಕೆಲಸದ ನಿಮಿತ್ತ ಬೈಜು ಮತ್ತು ವಿಷ್ಣು ಒಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದರೆ. ಆ ಕುಟುಂಬಗಳ ನಡುವೆ ಸ್ನೇಹ ಸಂಬಂಧವೂ ಇತ್ತು. ಆದರೆ, ಕೇವಲ ಒಂದು ಕಿಸ್ ಎಮೋಜಿಯೇ (Kiss Emoji) ಈ ಸ್ನೇಹವನ್ನೂ, ಪ್ರಾಣವನ್ನೂ ಕಿತ್ತುಕೊಂಡಿತು.
ಇದನ್ನೂ ಓದಿ: ಆಸ್ತಿಗಾಗಿ ತಾಯಿಯನ್ನೇ 15 ಬಾರಿ ಚಾಕುವಿನಿಂದ ಇರಿದು ಕೊಂದ ಕಿರಾತಕ ಮಗ
ಒಮ್ಮೆ ವೈಷ್ಣವಿ ಫೋನಿಗೆ ವಿಷ್ಣು ಕಿಸ್ ಎಮೋಜಿ ಹೊಂದಿದ ವಾಟ್ಸಾಪ್ ಸಂದೇಶವನ್ನು ಕಳಿಸಿದ್ದನು. ಆ ಸಂದೇಶವನ್ನು ನೋಡುತ್ತಿದ್ದಂತೆ ಬೈಜುವಿನ ಸಿಟ್ಟಿಗೆ ಮಿತಿ ಇರಲಿಲ್ಲ. ತಕ್ಷಣವೇ ಮನೆಗೆ ತೆರಳಿ ಪತ್ನಿಯೊಂದಿಗೆ ಜಗಳ ಆರಂಭಿಸಿದ. ವೈಷ್ಣವಿ ಈ ಕುರಿತು ಹೇಳಲು ಹೋದರೂ, ಬೈಜು ಕೇಳುವುದಕ್ಕೂ ಮುನ್ನವೇ ಅವಳ ಮೇಲೆ ಕತ್ತಿಯಿಂದ (Knife) ಹಲ್ಲೆ ಮಾಡಿದ್ದನು
ಬೈಜುವಿಂದ ತಪ್ಪಿಸಿಕೊಳ್ಳಲು ವೈಷ್ಣವಿ ಪಕ್ಕದ ಮನೆಗೆ ಓಡಿದ್ದಾಳೆ, ಆದರೆ ಪತಿಯ ಕೋಪ ಅಷ್ಟೂ ಸುಲಭವಾಗಿ ತಣಿಯಲಿಲ್ಲ. ಆತ ವಿಷ್ಣು ಮನೆಯೊಳಗೆ ನುಗ್ಗಿ, ಮೊದಲು ಆಕೆಯ ಸ್ನೇಹಿತನನ್ನು ಕೊಚ್ಚಿ ಹತ್ಯೆ ಮಾಡಿದ್ದ. ಬಳಿಕ ವೈಷ್ಣವಿಯ ಮೇಲೂ ನಿರ್ದಯವಾಗಿ ಹಲ್ಲೆ ನಡೆಸಿ ಕೊಂದಿದ್ದಾನೆ
ಈ ಭೀಕರ ಘಟನೆಯ ಬಳಿಕ ಬೈಜು ಮನೆಗೆ ಹೋಗಿ ಸ್ನಾನ ಮಾಡಿ ಬಟ್ಟೆ ಬದಲಿಸಿಕೊಂಡು ತನ್ನ ಸ್ನೇಹಿತನಿಗೆ ಕರೆ ಮಾಡಿದ್ದ. ಈ ವಿಷಯ ತಿಳಿದ ಸ್ನೇಹಿತನು ಪೊಲೀಸರಿಗೆ ಮಾಹಿತಿ ನೀಡಿದ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರ ಶವಗಳನ್ನು ವಶಕ್ಕೆ ಪಡೆದು, ಬೈಜುವನ್ನು ಬಂಧಿಸಿದ್ದಾರೆ
Husband Kills Wife Over Kiss Emoji



