ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ನಾಲ್ಕು ವರ್ಷದ ಬಾಲಕ ಧಾರುಣ ಸಾವು
ಹೈದರಾಬಾದ್‌ನ ಮೆಹದೀಪಟ್ನದಲ್ಲಿ ಮತ್ತೆ ಲಿಫ್ಟ್ ದುರಂತ! ಬಾಲಕ ಲಿಫ್ಟ್‌ನಲ್ಲಿ ಸಿಕ್ಕಿ ಜೀವ ಕಳೆದುಕೊಂಡ ದಾರುಣ ಘಟನೆ. 4.5 ವರ್ಷದ ಬಾಲಕ ಸೂರೇಂದರ್ ದುರ್ಘಟನೆಗೆ ಬಲಿಯಾದ ಬಾಲಕ
- ಲಿಫ್ಟ್ ದುರಂತದಲ್ಲಿ ನಾಲ್ಕು ವರ್ಷದ ಬಾಲಕ ಮೃತಪಟ್ಟ ಘಟನೆ
- ಲಿಫ್ಟ್ ತೊಂದರೆಯಿಂದ ಬಡ ಕುಟುಂಬಕ್ಕೆ ಭಾರೀ ಆಘಾತ
- ಭದ್ರತಾ ಕೊರತೆಯಿಂದ ಮತ್ತೊಂದು ಅಮೂಲ್ಯ ಜೀವ ಕಳೆದುಕೊಂಡ ದುರಂತ
ಹೈದರಾಬಾದ್ (Hyderabad) ನಗರದ ಮೆಹದೀಪಟ್ನ (Mehdipatnam) ಪ್ರದೇಶದಲ್ಲಿ ಮತ್ತೊಂದು ಲಿಫ್ಟ್ ದುರಂತ ನಡೆದಿದೆ. ನಾಲ್ಕು ವರ್ಷದ ಬಾಲಕ ಸೂರೇಂದರ್ (Surendar) ಅಪಾರ್ಟ್ಮೆಂಟ್ ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡು ಸಾವನ್ನಪ್ಪಿದ ಈ ದುರ್ಘಟನೆ ಸ್ಥಳೀಯರಲ್ಲಿ ಭಾರೀ ದುಃಖ ತರಿಸಿದೆ.
ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಇದೇ ಪ್ರದೇಶದಲ್ಲಿ ಇದು ಎರಡನೇ ಸಾವು. ಇದರಿಂದ ಅಪಾರ್ಟ್ಮೆಂಟ್‌ಗಳಲ್ಲಿ (Apartment) ಸುರಕ್ಷತಾ ವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ತಮ್ಮ ಮನೆಯಲ್ಲೇ ಶವವಾಗಿ ಪತ್ತೆ
ಘಟನೆ ಹೇಗೆ ನಡೆಯಿತು?
ಬಾಲಕನ ತಂದೆ ಶ್ಯಾಂ ಬಹದೂರ್ (Shyam Bahadur) ಮೂಲತಃ ನೇಪಾಳದವರು. ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಮೆಹದೀಪಟ್ನದ ಸಂತೋಷ್ ನಗರದಲ್ಲಿರುವ ಮುಜ್ತಾಬಾ ಅಪಾರ್ಟ್‌ಮೆಂಟ್‌ನಲ್ಲಿ (Apartment) ಸೆಕ್ಯೂರಿಟಿ ಗಾರ್ಡ್ (Watchman) ಆಗಿ ಕೆಲಸ ಮಾಡುತ್ತಿದ್ದರು. ಅಪಾರ್ಟ್‌ಮೆಂಟ್ ವ್ಯವಸ್ಥಾಪಕರು ಆ ಕುಟುಂಬಕ್ಕೆ ಲಿಫ್ಟ್ ಸಮೀಪ ಸಣ್ಣ ಕೊಠಡಿ ನೀಡಿದ್ದರು.
ಬುಧವಾರ ರಾತ್ರಿ, ಸೂರೇಂದರ್ ಆಟವಾಡುತ್ತಾ ಲಿಫ್ಟ್ ಬಳಿಗೆ ಹೋದಾಗ, ಲಿಫ್ಟ್ ಬಾಗಿಲ ನಡುವೆ ಸಿಕ್ಕಿಹಾಕಿಕೊಂಡಿದ್ದಾನೆ. ಆ ಕ್ಷಣದಲ್ಲೇ ಮೇಲಿನ ಮಹಡಿಯಲ್ಲಿ ಯಾರೋ ಲಿಫ್ಟ್ ಬಟನ್ ಒತ್ತಿದಾಗ, ಲಿಫ್ಟ್ ಮೇಲೆ ಚಲಿಸಿ ಬಾಲಕನನ್ನು ನುಚ್ಚುನೂರು ಮಾಡಿದೆ.
ಶೋಕದಲ್ಲಿ ಮುಳುಗಿದ ಕುಟುಂಬ
ಕುಟುಂಬದವರು ಬಾಲಕ ಕಾಣದಿದ್ದಾಗ ಹುಡುಕಿದ್ದಾರೆ, ಆಗ ಲಿಫ್ಟ್ ಒಳಗೆ ರಕ್ತದ ಮಡುವಿನಲ್ಲಿ ಅವನನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಲಕನನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ
ಈ ಅಮಾನವೀಯ ಘಟನೆ ಬಳಿಕ ಏಕೈಕ ಮಗನನ್ನು ಕಳೆದುಕೊಂಡ ದುಃಖದಲ್ಲಿ ತಾಯಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಭದ್ರತಾ ಕ್ರಮಗಳ ಬಗ್ಗೆ ಪ್ರಶ್ನಿಸತೊಡಗಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Hyderabad Tragedy, 4-Year-Old Crushed in Apartment Lift
Our Whatsapp Channel is Live Now 👇