ಬಿಜೆಪಿಯನ್ನು ವಿರೋಧಿಸಿದರೆ ಕಳಂಕಿತರಾಗುತ್ತಾರೆ; ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿಯಾದವ್ ಬಿಜೆಪಿ ಸರ್ಕಾರ ನಡೆಗೆ ಆಕ್ರೋಶ
ಪಾಟ್ನಾ: ದೇಶದಲ್ಲಿ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಆರ್‌ಜೆಡಿಯ ಅಗ್ರ ನಾಯಕ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿಯಾದವ್ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, ದೇಶದ ರಾಜಕೀಯ ಪರಿಸ್ಥಿತಿ ಮತ್ತು ವಾತಾವರಣವು ತುಂಬಾ ಕೆಟ್ಟದಾಗಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಮಾತನಾಡಿದರೆ ಕಳಂಕಿತರು, ಭ್ರಷ್ಟರು ಎಂದು ಆರೋಪಿಸಿದರು. ಅವರ ವಿರುದ್ಧ ಐಟಿ ಮತ್ತು ಇಡಿ ಶೋಧ ನಡೆಯುತ್ತಿದೆ ಎಂದು ಟೀಕಿಸಿದರು.
ಸುಳ್ಳು ಆರೋಪದ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ದಾಳಿಯಿಂದ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸುತ್ತಾರೆ, ಆದರೆ ಅವರು ಶರಣಾಗದಿದ್ದರೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸುತ್ತಾರೆ ಎಂದು ತೇಜಸ್ವಿ ಆರೋಪಿಸಿದರು.
ಆದರೆ, ಬಿಜೆಪಿ ಜತೆ ನಡೆದರೆ ಸತ್ಯಹರಿಶ್ಚಂದ್ರರಾಗುತ್ತಿದ್ದಾರೆ ಎಂದು ದೂರಿದರು. ಒಬ್ಬ ನಾಯಕನಿಗೆ ಎಷ್ಟೇ ಭ್ರಷ್ಟಾಚಾರದ ಕಲೆಗಳಿದ್ದರೂ ಬಿಜೆಪಿಗೆ ಸೇರಿ ಬಿಜೆಪಿಗೆ ಬೆಂಬಲ ನೀಡಿದರೆ ಪುಣ್ಯವಂತನಾಗುತ್ತಾನೆ ಎಂದು ಟೀಕಿಸಿದರು.
ಬಿಜೆಪಿಯವರು ಇಂತಹ ನಾಯಕರನ್ನು ವಾಷಿಂಗ್ ಮೆಷಿನ್ ನಲ್ಲಿ ಹಾಕಿ ಸ್ವಚ್ಛಗೊಳಿಸುತ್ತಾರೆ ಎಂದು ಲೇವಡಿ ಮಾಡಿದರು. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಸಿಪಿಐ-ಎಂ 11ನೇ ಮಹಾಧಿವೇಶನದಲ್ಲಿ ತೇಜಸ್ವಿ ಯಾದವ್ ಮಾತನಾಡಿದರು.
ಭಾರತದ ಸಂವಿಧಾನವನ್ನು ಉಳಿಸಲು ಒಗ್ಗಟ್ಟಾಗಿ ಹೋರಾಡಬೇಕೆಂದು ಅವರು ಸಭಿಕರಲ್ಲಿ ಮನವಿ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತಿರುವ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
If You Speak Against Bjp You Will Be Sent To Jail If You Stay With Bjp You Will Be Called Harishchandra Says Bihar Deputy Cm Tejashwi Yadav
Our Whatsapp Channel is Live Now 👇