10th ಪಾಸಾಗಿದ್ರೆ ಸಾಕು, ಪೋಸ್ಟ್ ಆಫೀಸ್ ನಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಿ
ಭಾರತೀಯ ಅಂಚೆ ಇಲಾಖೆಯಿಂದ ಹತ್ತನೇ ತರಗತಿ ಉತ್ತೀರ್ಣರಿಗೆ ಉದ್ಯೋಗಾವಕಾಶ! ಕರ್ನಾಟಕ ಸೇರಿದಂತೆ ದೇಶದ ಹಲವೆಡೆ 21,413 ಹುದ್ದೆಗಳ ಭರ್ತಿ, ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭ
- ಪೋಸ್ಟ್ ಆಫೀಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಆರಂಭ
- 10th ಪಾಸಾಗಿದ್ರೆ ಸಾಕು ಅರ್ಜಿ ಸಲ್ಲಿಸಬಹುದು
- ಆಯ್ಕೆ ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ನಡೆಯಲಿದೆ
Post Office Recruitment : ಭಾರತೀಯ ಅಂಚೆ ಇಲಾಖೆ ದೇಶದ ವಿವಿಧ ರಾಜ್ಯಗಳಲ್ಲಿ ಗ್ರಾಮೀಣ ಡಾಕ್ ಸೇವಕರ (GDS) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 21,413 ಹುದ್ದೆಗಳ ಭರ್ತಿ ಮಾಡಲಾಗಲಿದ್ದು, ಈ ಹುದ್ದೆಗಳಿಗೆ (Govt Jobs) ಹತ್ತನೇ ತರಗತಿ ಉತ್ತೀರ್ಣರು ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ದೆಹಲಿ, ಪಶ್ಚಿಮ ಬಂಗಾಳ ಸೇರಿದಂತೆ ಹಲವೆಡೆ ಹುದ್ದೆಗಳಿವೆ.
ಅರ್ಜಿ ಪ್ರಕ್ರಿಯೆ ಫೆಬ್ರವರಿ 10 ರಿಂದ ಆರಂಭಗೊಂಡಿದ್ದು, ಮಾರ್ಚ್ 3 ಕೊನೆಯ ದಿನ. ಅರ್ಜಿದಾರರು ಮಾರ್ಚ್ 6 ರಿಂದ 8 ರವರೆಗೆ ತಮ್ಮ ವಿವರಗಳಲ್ಲಿ ತಿದ್ದುಪಡಿ ಮಾಡಲು ಅವಕಾಶ ಹೊಂದಿದ್ದಾರೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ 5 ಲಕ್ಷವರೆಗೆ ಸಾಲ! ಅತೀ ಕಡಿಮೆ ಬಡ್ಡಿ
🎓 ಅರ್ಹತಾ ಮಾನದಂಡಗಳು
✔ ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
✔ ಕಂಪ್ಯೂಟರ್ ಬೇಸಿಕ್ ಜ್ಞಾನ ಹಾಗೂ ಸ್ಥಳೀಯ ಭಾಷೆಯ ಅರಿವು ಇರಬೇಕು
✔ ವಯೋಮಿತಿ 18 ರಿಂದ 40 ವರ್ಷ (ಒಬಿಸಿ – 3 ವರ್ಷ, ಎಸ್‌ಸಿ/ಎಸ್‌ಟಿ – 5 ವರ್ಷ, ಅಂಗವಿಕಲರಿಗೆ – 10 ವರ್ಷ ವಿನಾಯಿತಿ)
💰 ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ₹100, ಎಸ್‌ಸಿ/ಎಸ್‌ಟಿ/ಅಂಗವಿಕಲರಿಗೆ ಶುಲ್ಕವಿಲ್ಲ.
📝 ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್‌ಸೈಟ್ indiapostgdsonline.gov.in ಗೆ ಭೇಟಿ ನೀಡಿ
- ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿಯನ್ನು ಪರಿಶೀಲಿಸಿ ಮತ್ತು ಫೀಸ್ ಪಾವತಿ ಮಾಡಿ
- ಸಬ್ ಮೀಟ್ ಮಾಡಿ ಮತ್ತು ಮುಂದಿನ ಹಂತಗಳಿಗಾಗಿ ಕಾಯಿರಿ
ಕೇಂದ್ರದ ಮಹತ್ವದ ಯೋಜನೆ, ಇಂತಹ ಮಹಿಳೆಯರಿಗೆ ₹11,000 ಆರ್ಥಿಕ ನೆರವು!
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ
ಶಾರ್ಟ್‌ಲಿಸ್ಟ್ ಆದವರಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ
✨📩 ಅರ್ಜಿ ಸಲ್ಲಿಸಿ ನಿಮ್ಮ ಉದ್ಯೋಗದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ! 😊
India Post GDS Recruitment, 21,413 Vacancies Announced