India Corona Cases: ದೇಶದಲ್ಲಿ ಹೊಸದಾಗಿ 6,594 ಮಂದಿಗೆ ಕೊರೊನಾ ಪಾಸಿಟಿವ್
Corona Update in India – ನವದೆಹಲಿ: ದೇಶದಲ್ಲಿ ದಿನನಿತ್ಯದ ಕೊರೊನಾ ಪ್ರಕರಣಗಳು (Covid-19 Cases) ಕೊಂಚ ಇಳಿಮುಖವಾಗಿವೆ. ಇಂದು, ಕಳೆದ ಮೂರು ದಿನಗಳಲ್ಲಿ 8,000 ಕ್ಕಿಂತ ಹೆಚ್ಚಾಗಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 6,594 ಕ್ಕೆ ಇಳಿದಿದೆ.
ಈ ಮೂಲಕ ಸೋಮವಾರಕ್ಕಿಂತ ಶೇ 18ರಷ್ಟು ಕಡಿಮೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,32,36,695ಕ್ಕೆ ಏರಿಕೆಯಾಗಿದೆ. ಇವರಲ್ಲಿ 4,26,61,370 ಸಂತ್ರಸ್ತರು ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಇನ್ನೂ 50,548 ಪ್ರಕರಣಗಳು ಸಕ್ರಿಯವಾಗಿವೆ.
ಇದುವರೆಗೆ 5,24,771 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 4,035 ಜನರು ಚೇತರಿಸಿಕೊಂಡಿದ್ದಾರೆ ಮತ್ತು 3,21,873 ಜನರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಟ್ಟು ಪ್ರಕರಣಗಳಲ್ಲಿ, ಸಕ್ರಿಯ ಪ್ರಕರಣಗಳು (Corona Cases) ಶೇಕಡಾ 0.12 ರಷ್ಟಿದ್ದರೆ, ಚೇತರಿಕೆಯ ಪ್ರಮಾಣ ಶೇಕಡಾ 98.76 ಮತ್ತು ಸಾವುಗಳು ಶೇಕಡಾ 1.22 ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ 2.05 ತಲುಪಿದೆ ಎಂದು ಬಹಿರಂಗಪಡಿಸಿದ್ದಾರೆ. ಇದುವರೆಗೆ 85.54 ಕೋಟಿ ಕರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, 195.35 ಕೋಟಿ ಕರೋನಾ ಲಸಿಕೆ (Corona Vaccine) ಡೋಸ್‌ಗಳನ್ನು ವಿತರಿಸಲಾಗಿದೆ.
India Records 6,594 New Corona Virus Cases