India Corona Update: ದೇಶದಲ್ಲಿ 4,518 ಮಂದಿಗೆ ಕೊರೊನಾ ಸೋಂಕು ದೃಢ
Corona Cases Today: ದೇಶದಲ್ಲಿ ಸತತ ಎರಡನೇ ದಿನವೂ 4,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಭಾನುವಾರ 4,270 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದ್ದರೆ, ಇಂದು 4,518 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಒಟ್ಟು ಪ್ರಕರಣಗಳ ಸಂಖ್ಯೆಯನ್ನು 43,181,335 ಕ್ಕೆ ತರುತ್ತದೆ.
ಇವರಲ್ಲಿ 4,26,30,852 ಸಂತ್ರಸ್ತರು ಚೇತರಿಸಿಕೊಂಡಿದ್ದಾರೆ ಮತ್ತು 5,24,701 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 25,782 ಪ್ರಕರಣಗಳು ಸಕ್ರಿಯವಾಗಿವೆ. ಕಳೆದ 24 ಗಂಟೆಗಳಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಮತ್ತು 2,779 ಜನರು ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಒಟ್ಟು ಪ್ರಕರಣಗಳಲ್ಲಿ, 0.06 ಪ್ರಕರಣಗಳು ಸಕ್ರಿಯವಾಗಿವೆ, ಚೇತರಿಕೆಯ ಪ್ರಮಾಣವು 98.73 ಶೇಕಡಾ ಮತ್ತು ಮರಣ ಪ್ರಮಾಣವು ಶೇಕಡಾ 1.22 ರಷ್ಟಿದೆ. ದೇಶಾದ್ಯಂತ ಇದುವರೆಗೆ 1,94,12,87,000 ಡೋಸ್ ಕೊರೊನಾ ಲಸಿಕೆಗಳನ್ನು ವಿತರಿಸಲಾಗಿದ್ದು, ಭಾನುವಾರ ಒಂದೇ ದಿನದಲ್ಲಿ 2,57,187 ಜನರಿಗೆ ಲಸಿಕೆ ನೀಡಲಾಗಿದೆ.
India Reports 4,518 New Corona Cases
#COVID19 | India reports 4,518 fresh cases, 2,779 recoveries, and 9 deaths in the last 24 hours.
Total active cases are 25,782. pic.twitter.com/gszbp2e0fS
— ANI (@ANI) June 6, 2022