India Coronavirus: ಭಾರತದಲ್ಲಿ 8,084 ಹೊಸ ಕೊರೊನಾ ಪ್ರಕರಣಗಳು ವರದಿ
Corona Cases in India: ದೇಶದಲ್ಲಿ 8,084 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,32,30,101ಕ್ಕೆ ಏರಿಕೆಯಾಗಿದೆ.
India Corona Update – ನವದೆಹಲಿ: ದೇಶದಲ್ಲಿ 8,084 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,32,30,101ಕ್ಕೆ ಏರಿಕೆಯಾಗಿದೆ. ಇವರಲ್ಲಿ 4,26,57,335 ಸೋಂಕಿತರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 5,24,771 ಜನರು ಸಾವನ್ನಪ್ಪಿದ್ದಾರೆ. ಇನ್ನೂ 47,995 ಪ್ರಕರಣಗಳು ಸಕ್ರಿಯವಾಗಿವೆ.
ಭಾನುವಾರ ಬೆಳಿಗ್ಗೆಯಿಂದ 10 ಜನರು ಸಾವನ್ನಪ್ಪಿದ್ದಾರೆ ಮತ್ತು 4,592 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಹೊಸದಾಗಿ 2946 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 4319, ದೆಹಲಿಯಲ್ಲಿ 735, ಕರ್ನಾಟಕದಲ್ಲಿ 463 ಮತ್ತು ಹರಿಯಾಣದಲ್ಲಿ 304.
ಸಕ್ರಿಯ ಪ್ರಕರಣಗಳು ಶೇಕಡಾ 0.11 ತಲುಪಿದೆ. ಚೇತರಿಕೆಯ ಪ್ರಮಾಣವು 98.68 ಪ್ರತಿಶತ ಮತ್ತು ಮರಣ ಪ್ರಮಾಣವು 1.21 ಪ್ರತಿಶತ. ದೈನಂದಿನ ಧನಾತ್ಮಕ ದರವು 3.24 ಪ್ರತಿಶತವನ್ನು ತಲುಪಿದೆ. ಇದುವರೆಗೆ 1,95,19,81,150 ಡೋಸ್ ಕೊರೊನಾ ಲಸಿಕೆಗಳನ್ನು ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಭಾನುವಾರವಷ್ಟೇ 11,77,146 ಮಂದಿಗೆ ಲಸಿಕೆ ಹಾಕಲಾಗಿದೆ.
India Reports 8,084 New Corona Cases
India reports 8,084 COVID19 cases and 10 deaths. Active cases rise to 47,995. Daily positivity 3.24% pic.twitter.com/hW2FQsIf17
— ANI (@ANI) June 13, 2022
Follow Us on : Google News | Facebook | Twitter | YouTube