ವಿವಾದಾತ್ಮಕ ಡಿಯೋಡರೆಂಟ್ ಜಾಹೀರಾತು ನಿಷೇಧ
ವಿವಾದಾತ್ಮಕ ಡಿಯೋಡರೆಂಟ್ ಜಾಹೀರಾತನ್ನು ನಿಷೇಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ
ನವದೆಹಲಿ: ಲೆಯರ್ ಶಾಟ್ಸ್ ಕಂಪನಿಗೆ ಸೇರಿದ ವಿವಾದಾತ್ಮಕ ಡಿಯೋಡರೆಂಟ್ ಜಾಹೀರಾತನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ನಿಷೇಧಿಸಿದೆ. ಕೂಡಲೇ ಈ ಜಾಹೀರಾತನ್ನು ನಿಷೇಧಿಸುವಂತೆ ಇಂದು ಆದೇಶ ಹೊರಡಿಸಲಾಗಿದೆ.
ಜಾಹೀರಾತು ನಿಯಮಾವಳಿಗಳ ಪ್ರಕಾರ ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಐಬಿ ಇಲಾಖೆ ತಿಳಿಸಿದೆ. ಡಿಯೋಡರೆಂಟ್ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಟ್ವಿಟರ್ ಮತ್ತು ಯೂಟ್ಯೂಬ್ ಖಾತೆಗಳಿಂದ ಜಾಹೀರಾತನ್ನು ಅಳಿಸುವಂತೆ ಆದೇಶಿಸಿರುವುದಾಗಿ ಐಬಿ ಇಲಾಖೆ ಟ್ವೀಟ್ ನಲ್ಲಿ ತಿಳಿಸಿದೆ.
ಜಾಹೀರಾತು ಪ್ರಸಾರ ಮಾಡಿದ ಟಿವಿ ಚಾನೆಲ್‌ಗೂ ನೋಟಿಸ್ ಜಾರಿ ಮಾಡಲಾಗಿದ್ದು, ಚಾನೆಲ್ ಕೂಡ ಜಾಹೀರಾತು ನೀಡುತ್ತಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ತಿಳಿಸಿದೆ. ಅತ್ಯಾಚಾರದ ಪ್ರವೃತ್ತಿಯನ್ನು ಪ್ರಚೋದಿಸುವಂತಹ ಡಿಯೋಡರೆಂಟ್ ಜಾಹೀರಾತುಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಟೀಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
Information And Broadcasting Ministry Orders Suspension Of Controversial Layerr Shots Deodorant Advertisement
Follow us On
Google News |