ರೈಲು ಪ್ರಯಾಣಿಕರಿಗೆ ಬಂಪರ್ ಸುದ್ದಿ! ಟಿಕೆಟ್ ಬುಕ್ಕಿಂಗ್ ಸುಲಭ, ರಿಫಂಡ್ ಲಭ್ಯ
ಐಆರ್‌ಸಿಟಿಸಿ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಹೊಸ ನಿಯಮಗಳನ್ನು ಪರಿಚಯಿಸಿದೆ. ಆಧಾರ್ ಕಾರ್ಡ್ ಕಡ್ಡಾಯವಾಗಿದೆ, ಬುಕ್ಕಿಂಗ್ ಸಮಯ ಬದಲಾಗಿದೆ ಮತ್ತು ರಿಫಂಡ್ ನಿಯಮಗಳು ಸಹ ಸುಧಾರಿತವಾಗಿವೆ.

- ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಆಧಾರ್ ಕಾರ್ಡ್ ಕಡ್ಡಾಯ
- ಬುಕ್ಕಿಂಗ್ ಸಮಯ ಬೆಳಿಗ್ಗೆ 11:00ಕ್ಕೆ ಬದಲಾವಣೆ
- 24 ಗಂಟೆಗಳ ಒಳಗೆ ರದ್ದುಪಡಿಸಿದರೆ ರಿಫಂಡ್ ಸೌಲಭ್ಯ
ನಿಮ್ಮ ತತ್ಕಾಲ್ ಟಿಕೆಟ್ ಬುಕ್ ಮಾಡುತ್ತಿದ್ದೀರಾ? ಇಲ್ಲಿದೆ ಹೊಸ ನಿಯಮಗಳು!
IRCTC Tatkal Ticket Booking : ಹೌದು, ರೈಲು ಪ್ರಯಾಣಿಕರಿಗೆ ಐಆರ್‌ಸಿಟಿಸಿ ಹೊಸ ನಿಯಮಗಳನ್ನು ತಂದಿದೆ. ಈಗಿನಿಂದ ತತ್ಕಾಲ್ ಟಿಕೆಟ್ ಬುಕ್ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ನಕಲಿ ಟಿಕೆಟ್ ಬುಕ್ಕಿಂಗ್‌ನ್ನು (Ticket Booking) ತಡೆಯಲು ಈ ನಿಯಮವನ್ನು ತಂದಿದ್ದು, ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆ ಮತ್ತು ಪಾರದರ್ಶಕತೆ ಒದಗಿಸಲಿದೆ.
ಇದನ್ನೂ ಓದಿ: 19ನೇ ಕಂತಿನ ಪಿಎಂ ಕಿಸಾನ್ ಹಣ ಎಲ್ಲರಿಗೂ ಸಿಗೋದಿಲ್ಲ! ರೈತರಿಗೆ ಬಿಗ್ ಅಲರ್ಟ್
ಬದಲಾದ ಸಮಯ ಗಮನದಲ್ಲಿಡಿ!
ಇತ್ತಿಚೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸಮಯವನ್ನು ಬೆಳಿಗ್ಗೆ 10:00 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಗೆ ಮುಂದೂಡಲಾಗಿದೆ. ಹೀಗಾಗಿ, ಪ್ರಯಾಣಿಕರು ತಮ್ಮ ಬುಕ್ಕಿಂಗ್‌ಗಾಗಿ ಹೊಸ ಸಮಯಕ್ಕೆ ತಕ್ಕಂತೆ ಸಿದ್ಧರಾಗಬೇಕು.
ವಿಶೇಷವಾಗಿ, ಎಸಿ ಮತ್ತು ನಾನ್-ಎಸಿ ಕೋಚ್‌ಗಳಿಗೆ ಪ್ರತ್ಯೇಕ ಕೊಟಾ ವ್ಯವಸ್ಥೆಯನ್ನು ಐಆರ್‌ಸಿಟಿಸಿ ಒದಗಿಸಿದೆ, ಇದರಿಂದ ಪ್ರಯಾಣಿಕರು ತಾವು ಬಯಸಿದ ಸೀಟನ್ನು ಪಡೆಯುವ ಅವಕಾಶ ಹೆಚ್ಚುತ್ತದೆ.
ರಿಫಂಡ್ ಸುಧಾರಣೆ – ಪ್ರಯಾಣಿಕರಿಗೆ ಬಂಪರ್ ಆಫರ್!
ಇನ್ನು ಮೊದಲೇ ತತ್ಕಾಲ್ ಟಿಕೆಟ್ ರದ್ದುಪಡಿಸುವ ನಿಯಮಗಳು ಕಠಿಣವಾಗಿದ್ದವು. ಆದರೆ, ಇದೀಗ ಹೊಸ ನಿಯಮಗಳ ಪ್ರಕಾರ 24 ಗಂಟೆಗಳೊಳಗೆ ಟಿಕೆಟ್ ರದ್ದುಪಡಿಸಿದರೆ ಪ್ರಯಾಣಿಕರು ರಿಫಂಡ್ ಪಡೆಯಬಹುದು. ಇದರಿಂದ ಟಿಕೆಟ್ ಬುಕ್ಕಿಂಗ್ ಹೆಚ್ಚು ಸುಲಭ ಮತ್ತು ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.
ಇದನ್ನೂ ಓದಿ: ಮೋದಿ ಸರ್ಕಾರದಿಂದ ತಿಂಗಳಿಗೆ ₹3,000 ಪಿಂಚಣಿ ಘೋಷಣೆ! ಬಂಪರ್ ಯೋಜನೆ
ಡೈನಾಮಿಕ್ ದರ ನೀತಿ – ಬದಲಾದ ದರಗಳು!
ಟಿಕೆಟ್‌ಗಳ ಮೇಲೆ ಡಿಮ್ಯಾಂಡ್ ಮತ್ತು ಲಭ್ಯತೆ ಆಧಾರಿತ ದರ ಪದ್ದತಿ ಅನ್ನು ಐಆರ್‌ಸಿಟಿಸಿ ಜಾರಿಗೆ ತಂದಿದೆ. ಇದರಿಂದಾಗಿ ಟಿಕೆಟ್‌ಗಳ ಬೆಲೆಗಳಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಬುಕ್ ಮಾಡಿ ಲಾಭ ಪಡೆಯುವುದು ಉತ್ತಮ ಆಯ್ಕೆ.
IRCTC New Tatkal Ticket Booking Rules








