India News

19ನೇ ಕಂತಿನ ಪಿಎಂ ಕಿಸಾನ್ ಹಣ ಎಲ್ಲರಿಗೂ ಸಿಗೋದಿಲ್ಲ! ರೈತರಿಗೆ ಬಿಗ್ ಅಲರ್ಟ್

PM Kisan Scheme : ಪಿಎಂ ಕಿಸಾನ್ ಯೋಜನೆಯ 19ನೇ ಹಂತದಲ್ಲಿ ಅರ್ಹರಲ್ಲದ ರೈತರಿಗೆ ಹಣ ಲಭ್ಯವಿಲ್ಲ. ತಪ್ಪು ಮಾಹಿತಿಯಿಂದ ಹಣ ಪಡೆದರೂ, ಅದನ್ನು ಹಿಂತಿರುಗಿಸಬೇಕು. ಸಂಪೂರ್ಣ ಮಾಹಿತಿ ಇಲ್ಲಿದೆ.

  • ಇ-ಕೆವೈಸಿ ಪೂರ್ಣಗೊಳಿಸದ ರೈತರಿಗೆ ಹಣ ಸಿಗದು.
  • ಸರ್ಕಾರಿ ನೌಕರರು ಮತ್ತು ಹೈ-ಇನ್ಕಮ್ ರೈತರಿಗೆ ಯೋಜನೆ ಅನರ್ಹ.
  • ತಪ್ಪು ಮಾಹಿತಿ ನೀಡಿದರೆ ಸರ್ಕಾರ ಹಣ ವಾಪಸ್ ಪಡೆಯುತ್ತದೆ.

19th Installment of PM Kisan Scheme : ಪಿಎಂ ಕಿಸಾನ್ ಯೋಜನೆಯು ರೈತರಿಗೆ ಆರ್ಥಿಕ ಸಹಾಯ ನೀಡಲು ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲಾಗಿದೆ. ವರ್ಷಕ್ಕೆ ₹6,000 ಮೌಲ್ಯದ ಹಣವನ್ನು ಮೂರು ಹಂತಗಳಲ್ಲಿ ಡೈರೆಕ್ಟ್‌ ಬ್ಯಾಂಕ್ ಖಾತೆಗೆ ವರ್ಗಿಸಲಾಗುತ್ತದೆ.

ಆದರೆ ಈ ಬಾರಿ ಅರ್ಹರಲ್ಲದ ಕೆಲವರಿಗೆ ಹಣವನ್ನು ತಡೆದಿದ್ದು, ಅಕಸ್ಮಾತ್ ಅಂತಹವರಿಗೆ ಹಣ ಪಾವತಿಯಾಗಿದ್ದರೆ ಅವರು ಸ್ವತಃ ವಾಪಸ್ ನೀಡಬೇಕಾಗಿದೆ.

19ನೇ ಕಂತಿನ ಪಿಎಂ ಕಿಸಾನ್ ಹಣ ಎಲ್ಲರಿಗೂ ಸಿಗೋದಿಲ್ಲ! ರೈತರಿಗೆ ಬಿಗ್ ಅಲರ್ಟ್

ಹೌದು, ಹಣ ಪಡೆಯಲು ಇ-ಕೆವೈಸಿ ಅತ್ಯವಶ್ಯಕವಾಗಿದೆ. ನೀವು ಇ-ಕೆವೈಸಿ ಮಾಡಿಲ್ಲದಿದ್ದರೆ 19ನೇ ಹಂತದ ಹಣ ನಿಮ್ಮ ಖಾತೆಗೆ (Bank Account) ಬರುವುದಿಲ್ಲ.  ಇ-ಕೆವೈಸಿ ಅಥವಾ ಆಧಾರ್ ಮಾನ್ಯತೆಯನ್ನು ಆನ್‌ಲೈನ್‌ನಲ್ಲಿ ಅಥವಾ ಕಾಮನ್ ಸರ್ವೀಸ್ ಸೆಂಟರ್‌ನಲ್ಲಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಮಾಡಬಹುದು.

ಇದನ್ನೂ ಓದಿ: ಮೋದಿ ಸರ್ಕಾರದಿಂದ ತಿಂಗಳಿಗೆ ₹3,000 ಪಿಂಚಣಿ ಘೋಷಣೆ! ಬಂಪರ್ ಯೋಜನೆ

ಹೇಗಾದರೂ ತಪ್ಪು ಮಾಹಿತಿಯನ್ನು ನೀಡಿ ಯೋಜನೆಯ ಉಪಯೋಗ ಪಡೆಯುತ್ತಿದ್ದರೆ? ಸರ್ಕಾರ ಈಗಾಗಲೇ ₹335 ಕೋಟಿ ಹಣವನ್ನು ವಾಪಸ್ ಪಡೆದಿದೆ. ನೀವು ಹಣವನ್ನು ತಕ್ಷಣವೇ ಪಿಎಂಕಿಸಾನ್ ಪೋರ್ಟಲ್‌ನಲ್ಲಿ “ವಾಲಂಟರಿ ಸರಂಡರ್ ಆಫ್ ಪಿಎಂ ಕಿಸಾನ್ ಬೆನಿಫಿಟ್ಸ್” ಆಯ್ಕೆ ಮೂಲಕ ಹಿಂತಿರುಗಿಸಬೇಕು. ಇಲ್ಲವಾದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ.

PM Kisan Scheme 19th Installment

ಸರ್ಕಾರಿ ಉದ್ಯೋಗಸ್ಥರು, ಸಂಸದರು, ಸಚಿವರು, ಮೇಯರ್‌ಗಳು ಮತ್ತು ಹೈ-ಇನ್ಕಮ್ ರೈತರು ಪಿಎಂ ಕಿಸಾನ್ ಯೋಜನೆಯಿಂದ ಹೊರ ಉಳಿಯಬೇಕಾಗಿದೆ. ಬೇರೆಯವರು ಹಣ ಪಡೆಯಲು ಬ್ಯಾಂಕ್ ಮತ್ತು ಆಧಾರ್ ವಿವರಗಳನ್ನು ಸರಿಯಾಗಿ ಲಿಂಕ್ ಮಾಡಬೇಕು. ಲ್ಯಾಂಡ್ ದಾಖಲೆಗಳು ಅಪ್‌ಡೇಟ್ ಆಗಿರಬೇಕು.

ಇದನ್ನೂ ಓದಿ: ಈ ರಾಜ್ಯದ ಹೆಣ್ಮಕ್ಕಳಿಗೆ ಸಿಹಿ ಸುದ್ದಿ, ಮದುವೆಗೆ ಸಿಗುತ್ತೆ ₹55,000 ನೆರವು!

ಹೊಸ ನೋಂದಣೆಗೆ ಆಸಕ್ತರಾಗಿದ್ದರೆ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ “ನ್ಯೂ ಫಾರ್ಮರ್ ರಿಜಿಸ್ಟ್ರೇಶನ್” ಆಯ್ಕೆ ಮಾಡಿ, ಆಧಾರ್ ಮತ್ತು ಲ್ಯಾಂಡ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ. ಅಧಿಕಾರಿಗಳು ಪರಿಶೀಲನೆ ಮಾಡಿದ ನಂತರ ಯೋಜನೆಗೆ ಅರ್ಹತೆ ನಿರ್ಧಾರಗೊಳ್ಳುತ್ತದೆ.

ಹೀಗಾಗಿ, ನಿಮ್ಮ ವಿವರಗಳನ್ನು ಸದಾ ಸರಿಯಾಗಿ ಇಟ್ಟುಕೊಳ್ಳಿ ಮತ್ತು ಯಾವುದೇ ಅನರ್ಹತೆಗಳಿಂದ ದೂರವಿರಿ. ತಪ್ಪಿದರೆ ಹಣವನ್ನು ಹಿಂತಿರುಗಿಸಬೇಕಾದ ಹೊಣೆ ನಿಮ್ಮದೇ!

Not Everyone Will Get the 19th Installment of PM Kisan Scheme

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories