ಈ ರಾಜ್ಯದ ಹೆಣ್ಮಕ್ಕಳಿಗೆ ಸಿಹಿ ಸುದ್ದಿ, ಮದುವೆಗೆ ಸಿಗುತ್ತೆ ₹55,000 ನೆರವು!

ಉತ್ತರ ಪ್ರದೇಶ ಸರ್ಕಾರದ ಕನ್ಯಾ ವಿವಾಹ ಯೋಜನೆಯಡಿ ಬಡ ಕಾರ್ಮಿಕರ ಹೆಣ್ಣುಮಕ್ಕಳ ಮದುವೆಗೆ ₹55,000 ಅನುದಾನ. ಅಂತರ್ಜಾತಿ ವಿವಾಹಕ್ಕೆ ₹61,000 ಮತ್ತು ಸಾಮೂಹಿಕ ವಿವಾಹಕ್ಕೆ ₹65,000 ನೆರವು.

  • ಉತ್ತರ ಪ್ರದೇಶದಲ್ಲಿ ಕನ್ಯಾ ವಿವಾಹ ಯೋಜನೆಗೆ ಚಾಲನೆ
  • ಸಾಮೂಹಿಕ ವಿವಾಹಕ್ಕೆ ಪ್ರತಿ ಜೋಡಿಗೆ ₹65,000 ನೆರವು
  • ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ವಿವರ ಇಲ್ಲಿದೆ

ನಿಮ್ಮ ಮನೆಯ ಮಗಳ ಮದುವೆಗೆ ಹಣದ ಬಗ್ಗೆ ಚಿಂತೆಯಲ್ಲಿದ್ದೀರಾ? ಹಾಗಿದ್ದರೆ ಈ ಸುದ್ದಿ ಕೇಳಿ ಖುಷಿ ಆಗುತ್ತೆ. ಉತ್ತರ ಪ್ರದೇಶ ಸರ್ಕಾರ (Uttar Pradesh government) ತನ್ನ ಕಾರ್ಮಿಕ ವರ್ಗದ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ (marriage assistance scheme) ವಿಶೇಷ ಯೋಜನೆಯೊಂದನ್ನು ತಂದಿದೆ.

ಇದರಡಿಯಲ್ಲಿ ಮದುವೆಗೆ ಅಗತ್ಯವಿರುವ ಹಣದ ಭಾರವನ್ನು ಹಗುರಗೊಳಿಸಲು ಸರ್ಕಾರ ಈ ಯೋಜನೆಗೆ (Kanya Vivah Yojana) ಚಾಲನೆ ನೀಡಿದೆ.

ಇದನ್ನೂ ಓದಿ: 10th, ಪಿಯುಸಿ ಆದವರಿಗೆ ಸರ್ಕಾರಿ ನೌಕರಿ, ಪಶುಸಂಗೋಪನಾ ಇಲಾಖೆಯಲ್ಲಿ ಉದ್ಯೋಗ

ಅಂತರ್ಜಾತಿ ವಿವಾಹಕ್ಕೂ ಹೆಚ್ಚಿದ ನೆರವು!

ಹೌದು, ಇಲ್ಲಿ ವಿಶೇಷತೆ ಏನೆಂದರೆ, ಈ ಯೋಜನೆಯಡಿ ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ₹61,000 ಅನುದಾನವನ್ನು ನೀಡಲಾಗುತ್ತದೆ. ಇದು ಸಮಾಜದಲ್ಲಿ ಸಹಬಾಳ್ವೆಗೆ ಉತ್ತೇಜನ ನೀಡುತ್ತದೆ.

ಸಾಮೂಹಿಕ ವಿವಾಹಕ್ಕೆ ಹೆಚ್ಚುವರಿ ಆರ್ಥಿಕ ನೆರವು:

ಅದು ಮಾತ್ರವಲ್ಲದೆ, ಕನಿಷ್ಠ 11 ಜೋಡಿಗಳು ಒಂದೇ ಸ್ಥಳದಲ್ಲಿ ವಿವಾಹವಾಗುವ ಸಾಮೂಹಿಕ ವಿವಾಹವನ್ನು ಆಯೋಜಿಸಿದರೆ, ಪ್ರತಿ ಜೋಡಿಗೆ ₹65,000 ರೂಪಾಯಿಗಳ ಆರ್ಥಿಕ ನೆರವು ಸಿಗುತ್ತದೆ. ಒಟ್ಟಾರೆಯಾಗಿ, ಕಡಿಮೆ ವೆಚ್ಚದಲ್ಲಿ ಅದ್ದೂರಿ ಮದುವೆ ನಡೆಸಲು ಇದು ಉತ್ತಮ ಅವಕಾಶವಲ್ಲವೇ?

ಅರ್ಜಿಗಾಗಿ ಈ ದಾಖಲೆಗಳು ಅಗತ್ಯ:

ಅರ್ಜಿದಾರರು ಕಾರ್ಮಿಕ ನೋಂದಣಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಹುಡುಗಿ ಮತ್ತು ಹುಡುಗನ ವಯಸ್ಸಿನ ಪ್ರಮಾಣಪತ್ರ, ಮದುವೆ ಕಾರ್ಡ್ ಮತ್ತು ಪಡಿತರ ಚೀಟಿ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಬೇಕಾಗುತ್ತದೆ.

ಇದನ್ನೂ ಓದಿ: 10 ಲಕ್ಷದವರೆಗೆ ಅಡಮಾನ ರಹಿತ ಲೋನ್ ಯೋಜನೆ, ಹೊಸ ಉದ್ಯಮಗಳಿಗೆ ಬೆಂಬಲ

marriage assistance scheme

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಅರ್ಜಿಯನ್ನು ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅಥವಾ ಅಧಿಕೃತ ಪೋರ್ಟಲ್‌ನಲ್ಲಿ ಸಲ್ಲಿಸಬಹುದು: 🌐 upbocw.in. ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳ ಪ್ರತಿಯನ್ನು ಕಾರ್ಮಿಕ ಕಚೇರಿಗೆ ನೀಡಬೇಕು. ಗಮನಿಸಿ, ಮದುವೆಯಾದ ಮೂರು ತಿಂಗಳೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ.

ಯಾರ್ಯಾರು ಅರ್ಹರು?

ಈ ಯೋಜನೆಯಿಂದ ಲಾಭ ಪಡೆಯಲು ಹುಡುಗಿಯ ವಯಸ್ಸು ಕನಿಷ್ಠ 18 ವರ್ಷವಾಗಿರಬೇಕು ಮತ್ತು ಹುಡುಗನ ವಯಸ್ಸು 21 ವರ್ಷವಾಗಿರಬೇಕು. ಜೊತೆಗೆ, ಕಾರ್ಮಿಕ ನೋಂದಣಿಯು ಕನಿಷ್ಠ 365 ದಿನಗಳ ಮುಂಚಿತವಾಗಿರಬೇಕು.

ಸರ್ಕಾರ ನೀಡುತ್ತಿರುವ ಈ ಆಕರ್ಷಕ ಯೋಜನೆಯನ್ನು ಅಲ್ಲಿನ ಜನ ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಈ ರೀತಿ ಯೋಜನೆ ಬಂದರೆ ಒಳಿತಲ್ಲವೇ….!

ಏನೇ ಆಗಲಿ, ಹೆಣ್ಣುಮಕ್ಕಳ ಮದುವೆಗೆ ಶುಭವಾಗಲಿ, ಹಣದ ಭಾರವೂ ಕಡಿಮೆಯಾಗಲಿ! 💖 ಎಂದು ಹಾರೈಸೋಣ

UP Govt Offers 55,000 for Marriage

Related Stories