10th, ಪಿಯುಸಿ ಆದವರಿಗೆ ಸರ್ಕಾರಿ ನೌಕರಿ, ಪಶುಸಂಗೋಪನಾ ಇಲಾಖೆಯಲ್ಲಿ ಉದ್ಯೋಗ
ಬಿಪಿಎನ್‌ಎಲ್ ನೇಮಕಾತಿಯಲ್ಲಿ 2,152 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಮತ್ತು ವೇತನದ ವಿವರ ಇಲ್ಲಿದೆ.
- 2,152 ಹುದ್ದೆಗಳಿಗೆ ಬಿಪಿಎನ್‌ಎಲ್ ನೇಮಕಾತಿ
- ವೇತನ ₹20,000 ರಿಂದ ₹38,200 ವರೆಗೆ
- ಅರ್ಜಿ ಕೊನೆಯ ದಿನಾಂಕ: 12 ಮಾರ್ಚ್ 2025
Govt Job : ನಿಮಗೆ ಸರ್ಕಾರದ ನೌಕರಿ ಬೇಕೆ? ಹಾಗಾದರೆ ನಿಮಗೆ ಬಿಪಿಎನ್‌ಎಲ್‌ನಿಂದ ಉತ್ತಮ ಅವಕಾಶ ಬಂದಿದೆ. ಭಾರತೀಯ ಪಶುಸಂಗೋಪನಾ ನಿಗಮ ಲಿಮಿಟೆಡ್ (ಬಿಪಿಎನ್‌ಎಲ್) 2,152 ಹುದ್ದೆಗಳಿಗೆ ಭರ್ತಿಯನ್ನು (Govt Recruitment) ಪ್ರಕಟಿಸಿದೆ. ಹೌದು, ನೀವು ಸರಿಯಾಗಿ ಓದಿದ್ರಿ – 2,152 ಉದ್ಯೋಗಗಳು ಸದ್ಯ ಆಯ್ಕೆ ಪ್ರಕ್ರಿಯೆ ಶುರುವಾಗಿದೆ!
ಇದನ್ನೂ ಓದಿ: ರೈತರಿಗೆ 5 ಲಕ್ಷದ ಕ್ರೆಡಿಟ್ ಕಾರ್ಡ್ ಸಿಗಲಿದೆ! ಎಟಿಎಂನಲ್ಲೆ ಹಣ ಡ್ರಾ ಮಾಡಬಹುದು
ಹುದ್ದೆಗಳ ವಿವರ
ಹುದ್ದೆಗಳ ಪಟ್ಟಿಯನ್ನು ನೋಡಿದರೆ, ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ ಹುದ್ದೆಗೆ 362 ಸ್ಥಾನಗಳಿವೆ, ಸಹಾಯಕ ಹೂಡಿಕೆ ಅಂಗಸಂಸ್ಥೆಗೆ 1,428 ಹುದ್ದೆಗಳು ಮತ್ತು ಕಾರ್ಯಾಚರಣಾ ಸಹಾಯಕ ಹುದ್ದೆಗೆ ಮತ್ತಷ್ಟು 362 ಹುದ್ದೆಗಳು ಖಾಲಿ ಇವೆ.
ವೇತನದ ವಿವರ
ಹುದ್ದೆಗೆ ಅನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ, ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ ಹುದ್ದೆಗೆ ತಿಂಗಳಿಗೆ ₹38,200 ಸಿಗುತ್ತೆ. ಸಹಾಯಕ ಹೂಡಿಕೆ ಅಂಗಸಂಸ್ಥೆ ಹುದ್ದೆಗೆ ₹30,500 ಹಾಗೂ ಕಾರ್ಯಾಚರಣಾ ಸಹಾಯಕರಿಗೆ ₹20,000 ವೇತನವನ್ನು ನೀಡಲಾಗುತ್ತದೆ. ಭರ್ಜರಿ ಅಲ್ಲವೇ?
ಅರ್ಜಿ ಹೇಗೆ ಸಲ್ಲಿಸಬೇಕು?
ಅರ್ಜಿ ಸಲ್ಲಿಸಲು ಬಿಪಿಎನ್‌ಎಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: 🌐 bharatiyapashupalan.com ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಮತ್ತು ಕೊನೆಯ ದಿನಾಂಕ ಮಾರ್ಚ್ 12, 2025. ವಿಳಂಬ ಮಾಡದೇ ಈಗಲೇ ನಿಮ್ಮ ಅರ್ಜಿಯನ್ನು ಸಲ್ಲಿಸಿ.
ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಪರೀಕ್ಷೆ ನಡೆಯುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸಂದರ್ಶನ, ನಂತರ ದಾಖಲೆ ಪರಿಶೀಲನೆ ಮತ್ತು ಒಂದು ದಿನದ ತರಬೇತಿ ನಡೆಸಲಾಗುತ್ತದೆ. ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡವರೇ ಉದ್ಯೋಗಕ್ಕೆ ಆಯ್ಕೆ ಆಗುತ್ತಾರೆ.
ಇದನ್ನೂ ಓದಿ: 10 ಲಕ್ಷದವರೆಗೆ ಅಡಮಾನ ರಹಿತ ಲೋನ್ ಯೋಜನೆ, ಹೊಸ ಉದ್ಯಮಗಳಿಗೆ ಬೆಂಬಲ
ಯಾರು ಅರ್ಹರು?
ಅರ್ಹತೆಯು ಹುದ್ದೆಗೆ ಅನುಗುಣವಾಗಿದ್ದು, 10ನೇ ತರಗತಿ, ಪಿಯುಸಿ ಅಥವಾ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ವಯೋಮಿತಿ 18 ರಿಂದ 45 ವರ್ಷದೊಳಗಿನವರಿಗೆ ಮಾತ್ರ ಅವಕಾಶ.
ಈ ಹುದ್ದೆಗಳು ಕನಿಷ್ಟ ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ಸಹ ಅವಕಾಶ ನೀಡುತ್ತವೆ. ಹಾಗಾಗಿ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ!
BPNL has announced recruitment for 2152 positions