ರೈತರಿಗೆ 5 ಲಕ್ಷದ ಕ್ರೆಡಿಟ್ ಕಾರ್ಡ್ ಸಿಗಲಿದೆ! ಎಟಿಎಂನಲ್ಲೆ ಹಣ ಡ್ರಾ ಮಾಡಬಹುದು
2025 ಕೇಂದ್ರ ಬಜೆಟ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಗ್ರಾಮೀಣ ಅಭಿವೃದ್ಧಿಗೆ ನೆರವು ನೀಡಲಿದೆ.
- ಕೃಷಿ ಕ್ಷೇತ್ರದಲ್ಲಿ ರೈತರ ಆರ್ಥಿಕ ಅಗತ್ಯಗಳನ್ನು ಉತ್ತೇಜಿಸಲು ನಿರ್ಣಯ
- 1 ಕೋಟಿ ರೈತರನ್ನು ಯೋಜನೆಯಲ್ಲಿ ಸೇರಿಸುವ ಯೋಜನೆ
- ಸಕಾಲದಲ್ಲಿ ಪಾವತಿ ಮಾಡಿದರೆ 4% ಬಡ್ಡಿ ಸಬ್ಸಿಡಿ ಲಭ್ಯ
Kisan Credit Card : 2025 ಬಜೆಟ್‌ನಲ್ಲಿ ರೈತರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ವಿಸ್ತರಿಸಲಾಗಿದೆ. ಈಗ ರೈತರು ₹5 ಲಕ್ಷವರೆಗೆ ಕಡಿಮೆ ಬಡ್ಡಿದರದ ಸಾಲವನ್ನು (Loan) ಪಡೆಯಬಹುದಾಗಿದೆ. ಇದರಿಂದ ಕೃಷಿಯ (Agriculture) ಜೊತೆಗೆ ಪಶುಪಾಲನೆ ಮತ್ತು ಮೀನುಗಾರಿಕೆಗೆ ಆರ್ಥಿಕ ಸಹಾಯವೂ ಲಭಿಸಲಿದೆ.
ರೈತರಿಗೆ ತ್ವರಿತ ಹಣಕಾಸು ನೆರವು ಒದಗಿಸಲು ಕಾರ್ಯನಿರ್ವಹಿಸುವ ಕಿಸಾನ್ ಕ್ರೆಡಿಟ್ ಕಾರ್ಡ್‌ನಲ್ಲಿ (Kisan Credit Card) ವೈಯಕ್ತಿಕ ಗುರುತು ಸಂಖ್ಯೆ (PIN) ಮತ್ತು ಅಂತರ್‌ರಾಷ್ಟ್ರೀಯ ಗುರುತು ಸಂಖ್ಯೆ (IIN) ಒಳಗೊಂಡಿದೆ.
ರೈತರು ಈ ಕಾರ್ಡ್ ಬಳಸಿ ಯಾವುದೇ ಎಟಿಎಂನಲ್ಲಿ ನಗದು ತೆಗೆಯಬಹುದು. ಬಡ್ಡಿದರ ಸಬ್ಸಿಡಿ ಯೋಜನೆಯಡಿ ₹5 ಲಕ್ಷವರೆಗೆ ಸಾಲ (Loan) ಪಡೆಯಲು ಅವಕಾಶವಿದೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಸಿಹಿ ಸುದ್ದಿ, ಬಂತು 16 ಲಕ್ಷ ಸಿಗುವ ಸ್ಕೀಮ್
1998ರಲ್ಲಿ ಪ್ರಾರಂಭವಾದ ಈ ಯೋಜನೆಯು ರೈತರಿಗೆ ತ್ವರಿತ ಮತ್ತು ಕಡಿಮೆ ಬಡ್ಡಿದರದ ಸಾಲ ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಮಾರ್ಚ್-ಏಪ್ರಿಲ್ 2024ರ ತನಕ 7.75 ಕೋಟಿಗಿಂತ ಹೆಚ್ಚು ಸಕ್ರಿಯ ಖಾತೆಗಳನ್ನು ಹೊಂದಿದ್ದು, ₹9.81 ಲಕ್ಷ ಕೋಟಿ ಮೌಲ್ಯದ ಸಾಲ ಮಂಜೂರಾಗಿದೆ.
ಕೇಂದ್ರ ಸರ್ಕಾರ 7.7 ಕೋಟಿ ರೈತರನ್ನು ಈ ಯೋಜನೆಯಲ್ಲಿ ಸೇರಿಸುವ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಹೆಚ್ಚಿನ ಆರ್ಥಿಕ ಲಾಭ ಸಿಗಲಿದೆ. ಹೆಚ್ಚುವರಿ 1 ಕೋಟಿ ರೈತರನ್ನು ಈ ಯೋಜನೆ ವ್ಯಾಪ್ತಿಗೆ ತರಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಬಂಪರ್ ಸುದ್ದಿ! ಫೆಬ್ರವರಿ 24 ರಂದು ರೈತರ ಖಾತೆಗೆ ₹2,000 ರೂಪಾಯಿ ಜಮಾ
ಸಾಲದ ಮೇಲಿನ ಬಡ್ಡಿದರದಲ್ಲಿ ರೈತರಿಗೆ ಸಬ್ಸಿಡಿಯೂ ನೀಡಲಾಗುತ್ತದೆ. ₹3 ಲಕ್ಷದವರೆಗೆ 7% ಬಡ್ಡಿದರ ನಿಗದಿಯಲ್ಲಿದ್ದು, ಸಕಾಲದಲ್ಲಿ ಪಾವತಿ ಮಾಡಿದರೆ ಅದು 4% ಕ್ಕೆ ಇಳಿಯುತ್ತದೆ.
₹3 ಲಕ್ಷಕ್ಕಿಂತ ಹೆಚ್ಚಿನ ಸಾಲಗಳಿಗೆ ಬ್ಯಾಂಕುಗಳ ಬಡ್ಡಿದರ ಭಿನ್ನವಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ರೈತರು ತಮ್ಮ ಬ್ಯಾಂಕುಗಳ ಅಧಿಕೃತ ವೆಬ್‌ಸೈಟ್ ಅಥವಾ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
Kisan Credit Card Brings Huge Benefits for Farmers
Our Whatsapp Channel is Live Now 👇