ದಿನ ಭವಿಷ್ಯ 05 ನವೆಂಬರ್ 2026, ಗುರುವಾರ
Today Horoscope: ನವೆಂಬರ್ 5ರ ದಿನ ಭವಿಷ್ಯದ ಪ್ರಕಾರ ಕೆಲವು ರಾಶಿಯವರಿಗೆ ಹಣಕಾಸಿನ ಲಾಭ, ಹೊಸ ಅವಕಾಶಗಳು ಹಾಗೂ ಶುಭ ಸುದ್ದಿಗಳು ದೊರೆಯಲಿವೆ.

ಈ ದಿನ ಕೆಲವು ರಾಶಿಗಳಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ; ಇಲ್ಲಿದೆ ಸಂಪೂರ್ಣ ರಾಶಿ ಫಾಲ: ದಿನ ಭವಿಷ್ಯ 05-11-2026: ಶುಭ ಸುದ್ದಿಯಿಂದ ಸಂತಸ! ಈ ರಾಶಿಗಳ ಬಹುದಿನದ ಆಸೆ ಈಡೇರುವ ಸಾಧ್ಯತೆ
ಮೇಷ ರಾಶಿ: ಸಾಲ ಪಡೆಯುವ ಪ್ರಯತ್ನಗಳು ಯಶಸ್ವಿಯಾಗಲಿದ್ದು, ಉದ್ಯೋಗ, ವೈಯಕ್ತಿಕ ಕಾರಣಗಳಿಂದ ಸ್ಥಳ ಬದಲಾವಣೆಯಾಗಬಹುದು. ಶುಭಕಾರ್ಯಗಳಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದ್ದು, ಪ್ರಯಾಣದ ವೇಳೆ ಆರೋಗ್ಯ ಎಚ್ಚರವಿರಲಿ.
ವೃಷಭ ರಾಶಿ: ಮನೆಯಲ್ಲಿ ಶುಭಕಾರ್ಯಗಳು ನೆರವೇರಲಿದ್ದು, ದೂರದ ಬಂಧುಗಳಿಂದ ಅನುಕೂಲವಾಗಲಿದೆ. ವಿದೇಶ ಪ್ರಯಾಣದ ಯೋಗದ ಜೊತೆಗೆ ಅನಿರೀಕ್ಷಿತ ಹಣದ ಲಾಭ ಮತ್ತು ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ.
ಮಿಥುನ ರಾಶಿ: ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳಬಹುದು, ಮಾತಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು, ವ್ಯಾಪಾರಸ್ಥರು ಆತುರದ ನಿರ್ಧಾರಗಳಿಂದ ದೂರವಿರಲಿ.
ಕರ್ಕಾಟಕ ರಾಶಿ: ಬಹುದಿನಗಳಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಂಡು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯಲಿದ್ದು, ವೃತ್ತಿಯಲ್ಲಿ ಪ್ರಗತಿ ಹಾಗೂ ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಸಿಂಹ ರಾಶಿ: ಆರೋಗ್ಯ ಉತ್ತಮವಾಗಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಹೊಸ ವಸ್ತುಗಳ ಖರೀದಿ, ಶುಭ ಸುದ್ದಿ ಹಾಗೂ ಅನಿರೀಕ್ಷಿತ ಹಣದ ಲಾಭದಿಂದ ಸಂತಸ ಹೆಚ್ಚಾಗಲಿದೆ.
ಕನ್ಯಾ ರಾಶಿ: ಅಂದುಕೊಂಡ ಕೆಲಸಗಳಿಗೆ ಅಡೆತಡೆಗಳು ಎದುರಾಗಬಹುದು, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ತಾಳ್ಮೆಯಿಂದಿರಿ. ಮಕ್ಕಳ ವಿಚಾರದಲ್ಲಿ ಹಠ ಬೇಡ, ಹಳೆಯ ದ್ವೇಷ ಮರೆತು ಮುಂದೆ ಸಾಗುವುದು ಉತ್ತಮ.
ತುಲಾ ರಾಶಿ: ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದ್ದು, ಆರ್ಥಿಕವಾಗಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಹಣದ ಲಾಭ, ಸಾಮಾಜಿಕ ಗೌರವ ಹೆಚ್ಚಳ ಹಾಗೂ ಸಾಲದ ಹೊರೆ ಕಡಿಮೆಯಾಗುವ ಯೋಗವಿದೆ.
ವೃಶ್ಚಿಕ ರಾಶಿ: ಉದ್ಯೋಗ ಮತ್ತು ವೃತ್ತಿಯಲ್ಲಿ ಪ್ರಗತಿ, ಅನಗತ್ಯ ಖರ್ಚು ಹಾಗೂ ಪ್ರಯಾಣದಿಂದ ಒತ್ತಡ ಹೆಚ್ಚಾಗಬಹುದು. ಮಹಿಳೆಯರ ಮೂಲಕ ಹಣಕಾಸಿನ ಅನುಕೂಲ ದೊರೆಯಲಿದ್ದು, ಆತ್ಮೀಯರ ಭೇಟಿ ವಿಳಂಬವಾಗಬಹುದು.
ಧನು ರಾಶಿ: ನಿರೀಕ್ಷೆಗೂ ಮೀರಿದ ಅವಕಾಶಗಳು ದೊರೆಯಲಿದ್ದು, ಮನೆಯಲ್ಲಿ ಶುಭಕಾರ್ಯಗಳನ್ನು ಆಯೋಜಿಸುವ ಪ್ರಯತ್ನ ಫಲ ನೀಡಲಿದೆ. ಆತ್ಮೀಯರ ಸಹಕಾರ, ಶುಭ ಸುದ್ದಿ ಹಾಗೂ ಅನಿರೀಕ್ಷಿತ ಹಣದ ಲಾಭವಾಗುವ ಸಾಧ್ಯತೆ ಇದೆ.
ಮಕರ ರಾಶಿ: ಹಣಕಾಸಿನ ವಿಚಾರದಲ್ಲಿ ಸವಾಲುಗಳು ಎದುರಾಗಬಹುದು, ಆರೋಗ್ಯದ ಬಗ್ಗೆಯೂ ಗಮನವಿರಲಿ. ಉದ್ಯೋಗದಲ್ಲಿ ಪ್ರಗತಿ ಕಂಡರೂ, ಕೆಲವು ಕೆಲಸಗಳು ವಿಳಂಬವಾಗುವುದರಿಂದ ಮನಸ್ಸಿನಲ್ಲಿ ಚಿಂತೆ ಮೂಡಬಹುದು.
ಕುಂಭ ರಾಶಿ: ಮನೆ, ಜಮೀನು ಸೇರಿದಂತೆ ಸ್ಥಿರಾಸ್ತಿ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಪ್ರಯಾಣ ಮತ್ತು ಹೊಸ ಪರಿಚಯಗಳಿಂದ ಅನುಕೂಲವಾದರೂ, ಕೆಲವು ಕೆಲಸಗಳಿಗೆ ಅಡೆತಡೆ ಎದುರಾಗಬಹುದು.
ಮೀನ ರಾಶಿ: ಹೊಸ ಕೆಲಸಗಳ ಆರಂಭದಲ್ಲಿ ವಿಳಂಬವಾಗಬಹುದು, ಆಹಾರದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಅನಗತ್ಯ ಆತಂಕ ಬಿಟ್ಟು, ಸುಳ್ಳು ಹೇಳದೆ ಶಾಂತವಾಗಿ ಸಮಸ್ಯೆಗಳನ್ನು ಎದುರಿಸುವುದು ಉತ್ತಮ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.






