ಕನಸಿನಲ್ಲಿ ಕಾಡಿದ ಕೊಲೆಯಾದ ವ್ಯಕ್ತಿ; ಕೊನೆಗೂ ಪೊಲೀಸರಿಗೆ ಶರಣಾದ ಆರೋಪಿ
ಸಣ್ಣ ಜಗಳಕ್ಕೆ ಆಪ್ತ ಗೆಳೆಯನನ್ನೇ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ಭಯಾನಕ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ. ಸ್ನೇಹಿತನ ನೆನಪು ಮತ್ತು ದುಃಸ್ವಪ್ನಗಳಿಂದ ನೆಮ್ಮದಿ ಕಳೆದುಕೊಂಡು ಕೊನೆಗೆ ಪೊಲೀಸರಿಗೆ ಶರಣಾಗಿದ್ದಾನೆ.

ಸಣ್ಣ ವಿಚಾರಕ್ಕೆ ಆರಂಭವಾದ ಜಗಳವೊಂದು ಕೊಲೆಯಲ್ಲಿ ಅಂತ್ಯಗೊಂಡಿದ್ದು, ಬಳಿಕ ನಡೆದ ಬೆಳವಣಿಗೆಗಳು ಮಹಾರಾಷ್ಟ್ರದಲ್ಲಿ (Maharashtra) ಕುತೂಹಲಕ್ಕೆ ಕಾರಣವಾಗಿವೆ. ತನ್ನ ಆತ್ಮೀಯ ಸ್ನೇಹಿತನನ್ನೇ ಕೊಂದ ವ್ಯಕ್ತಿ, ಘಟನೆಯ ಬಳಿಕ ನೆಮ್ಮದಿ ಕಳೆದುಕೊಂಡು ಕೊನೆಗೆ ತಾನಾಗಿಯೇ ಪೊಲೀಸರ ಮುಂದೆ ಹಾಜರಾಗಿದ್ದಾನೆ.
ಥಾಣೆ ಜಿಲ್ಲೆಯ ಮೊತಗಾವ್‌ನಲ್ಲಿ ಕಳೆದ ತಿಂಗಳ 9ರಂದು ಈ ಘಟನೆ ನಡೆದಿತ್ತು. ವಿಶಾಲ್ ಕದಮ್ ಮತ್ತು ಪ್ರಭು ಕರ್ಕಡೆ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಘಟನೆ ನಡೆದ ರಾತ್ರಿ ಇಬ್ಬರೂ ಒಟ್ಟಿಗೆ ಮದ್ಯ ಸೇವಿಸುತ್ತಿದ್ದಾಗ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ಶುರುವಾಗಿದೆ. ಆರಂಭದಲ್ಲಿ ಸಾಮಾನ್ಯ ವಾಗ್ವಾದದಂತೆ ಕಂಡಿದ್ದ ಜಗಳ ಕೆಲವೇ ಹೊತ್ತಿನಲ್ಲಿ ವಿಕೋಪಕ್ಕೆ ತಿರುಗಿದೆ.
ಆಕ್ರೋಶಗೊಂಡ ಪ್ರಭು, ವಿಶಾಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಮುಷ್ಟಿಯಿಂದ ಗುದ್ದಿ, ಕಾಲಿನಿಂದ ಒದ್ದ ಪರಿಣಾಮ ವಿಶಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಚಿಲ್ಲರೆ ವಿಚಾರಕ್ಕೆ ಜಗಳ; ಚಲಿಸುವ ಬಸ್‌ನಿಂದ ತಳ್ಳಲ್ಪಟ್ಟ ಮಹಿಳಾ ಕಂಡಕ್ಟರ್ ಸಾವು
ಗೆಳೆಯನ ಸಾವಿನಿಂದ ಗಾಬರಿಗೊಂಡ ಪ್ರಭು, ನಡೆದ ಘಟನೆಯನ್ನು ತನ್ನ ಮಾಲೀಕ ಸಂದೇಶ್‌ಗೆ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ಸಾಕ್ಷ್ಯ ಮರೆಮಾಚಲು ನಿರ್ಧರಿಸಿದ್ದಾರೆ. ಸಮೀಪದ ಹಳ್ಳದ ಬಳಿ ವಿಶಾಲ್ ಮೃತದೇಹವನ್ನು ಹೂತು ಹಾಕಿರುವುದಾಗಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಆದರೆ, ಘಟನೆ ಮುಚ್ಚಿಹಾಕಿದರೂ ಪ್ರಭುವಿಗೆ ಮಾನಸಿಕ ನೆಮ್ಮದಿ ಸಿಗಲಿಲ್ಲ. ಸುಮಾರು 20 ದಿನಗಳ ಕಾಲ ನಿದ್ರೆಯಲ್ಲೂ ವಿಶಾಲ್ ಕಾಣಿಸಿಕೊಳ್ಳುತ್ತಿದ್ದನೆಂಬ ಭಯಾನಕ ಅನುಭವ ಆತನನ್ನು ಕಾಡಿದೆ. ದುಃಸ್ವಪ್ನಗಳಿಂದ ನಿದ್ರೆ ಕಳೆದುಕೊಂಡಿದ್ದಲ್ಲದೆ, ಸ್ನೇಹಿತನನ್ನು ಕೊಂದ ಪಶ್ಚಾತ್ತಾಪವೂ ಆತನನ್ನು ಕಾಡತೊಡಗಿದೆ.
ಇದನ್ನೂ ಓದಿ: ತರಗತಿಯಲ್ಲೇ ಕುಸಿದು ಬಿದ್ದು 3ನೇ ತರಗತಿ ವಿದ್ಯಾರ್ಥಿನಿ ಸಾವು; ವೈರಲ್ ಸಿಸಿಟಿವಿ ದೃಶ್ಯ
ಕೊನೆಗೆ ಈ ಮಾನಸಿಕ ಒತ್ತಡವನ್ನು ತಡೆದುಕೊಳ್ಳಲಾಗದೆ ಥಾಣೆ ಪೊಲೀಸರ (Thane Police) ಮುಂದೆ ಹಾಜರಾಗಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ನ್ಯಾಯಾಲಯದ ಆದೇಶದ ಬಳಿಕ ಕೊಲೆ ಆರೋಪಿಯಾಗಿರುವ ಪ್ರಭು ಹಾಗೂ ಮೃತದೇಹವನ್ನು ಹೂಳಲು ಸಹಕರಿಸಿದ ಆರೋಪ ಎದುರಿಸುತ್ತಿರುವ ಸಂದೇಶ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



