ರೇಷನ್ ಕಾರ್ಡ್ ಇದ್ದವರಿಗೆ ಇದೇ ಕೊನೆಯ ಅವಕಾಶ; ಇನ್ನೂ 41 ಲಕ್ಷ ಜನರ ಇ-ಕೆವೈಸಿ ಬಾಕಿ!

ರಾಜ್ಯದಲ್ಲಿ ಇನ್ನೂ 41 ಲಕ್ಷಕ್ಕೂ ಅಧಿಕ ಪಡಿತರ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿಲ್ಲ. ನವೆಂಬರ್ 10 ಕೊನೆಯ ಗಡುವಾಗಿದ್ದು, ಅಷ್ಟರೊಳಗೆ ಪ್ರಕ್ರಿಯೆ ಮುಗಿಸದಿದ್ದರೆ ಪಡಿತರ ಸೌಲಭ್ಯಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಪಡಿತರ ಚೀಟಿ (Karnataka Ration Card) ಹೊಂದಿರುವವರಿಗೆ ಆಹಾರ ಇಲಾಖೆ ಮಹತ್ವದ ಸೂಚನೆ ನೀಡಿದೆ.

ಸರ್ಕಾರದ ಪಡಿತರ ಸೌಲಭ್ಯ ಪಡೆಯುತ್ತಿರುವ ಕುಟುಂಬಗಳ ಸದಸ್ಯರು ಮರು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ನಿಗದಿಪಡಿಸಿರುವ ಅಂತಿಮ ದಿನಾಂಕ ಹತ್ತಿರ ಬಂದಿದೆ. ಇನ್ನೂ ಲಕ್ಷಾಂತರ ಜನರು ಈ ಪ್ರಕ್ರಿಯೆ ಮುಗಿಸದಿರುವುದು ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿತ್ತು. ನವೆಂಬರ್ 3ರ ಅಂತ್ಯಕ್ಕೆ 2,26,30,747 ಜನರು ಮಾತ್ರ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಉಳಿದ 41,33,529 ಫಲಾನುಭವಿಗಳು ಇನ್ನೂ ಇ-ಕೆವೈಸಿ ಮಾಡಿಸಬೇಕಿದೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ

ಈ ಹಿನ್ನೆಲೆಯಲ್ಲಿ ಬಾಕಿ ಇರುವ ಎಲ್ಲರೂ ನವೆಂಬರ್ 10ರೊಳಗೆ ಪ್ರಕ್ರಿಯೆ ಮುಗಿಸಿಕೊಳ್ಳುವಂತೆ ಇಲಾಖೆ ಸೂಚಿಸಿದೆ. ಈಗಾಗಲೇ ಗಡುವನ್ನು ಒಂದು ಬಾರಿ ವಿಸ್ತರಿಸಲಾಗಿದ್ದು, ನವೆಂಬರ್ 10ರ ನಂತರ ಮತ್ತೆ ದಿನಾಂಕ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಪಡಿತರ ಸೌಲಭ್ಯಕ್ಕೂ ಅಡ್ಡಿಯಾಗುವ ಸಾಧ್ಯತೆಯಿದೆ.

BPL Ration Card

ಮೊಬೈಲ್‌ನಲ್ಲೇ ಇ-ಕೆವೈಸಿ ಮಾಡುವುದು ಹೇಗೆ?

ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ‘ಅನ್ನ ಸೇವೆ’ (Anna Seva App) ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಮಾಡಿಸಬಹುದು. ಇದಕ್ಕಾಗಿ ಮೊದಲು ಆ್ಯಪ್ ತೆರೆಯಬೇಕು. ಅಲ್ಲಿ ಕಾಣಿಸುವ ‘ಸ್ವಯಂ/ನಾಗರಿಕ’ ಆಯ್ಕೆಯನ್ನು ಆರಿಸಿಕೊಳ್ಳಬೇಕು.

ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು. ಆ ಬಳಿಕ ರೇಷನ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಒಟಿಪಿ (OTP) ಪಡೆಯಬೇಕು. ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿದರೆ ಕುಟುಂಬದ ಸದಸ್ಯರ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.

ಇದನ್ನೂ ಓದಿ: ಬಸ್ ಟಿಕೆಟ್ ದರ ಹೆಚ್ಚಳ; ಬೆಂಗಳೂರು ಸೇರಿ ರಾಜ್ಯಾದ್ಯಂತ ಬಸ್ ದರ ಏರಿಕೆ! ಹೊಸ ದರಗಳ ಪಟ್ಟಿ ಇಲ್ಲಿದೆ

ಆ ಪಟ್ಟಿಯಲ್ಲಿ ಯಾರ ಇ-ಕೆವೈಸಿ ಬಾಕಿ ಇದೆಯೋ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಹಾಯಕ ಅಪ್ಲಿಕೇಶನ್‌ಗಳ ನೆರವಿನಿಂದ ಮುಖ ಗುರುತಿಸುವಿಕೆ (Face Recognition) ಪ್ರಕ್ರಿಯೆ ಪೂರ್ಣಗೊಳಿಸಬೇಕು. ಎಲ್ಲ ಹಂತಗಳು ಯಶಸ್ವಿಯಾದ ಬಳಿಕ ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಕಾಣಿಸುತ್ತದೆ.

ನ್ಯಾಯಬೆಲೆ ಅಂಗಡಿಯಲ್ಲೂ ಮಾಡಿಸಬಹುದು

ಸ್ಮಾರ್ಟ್‌ಫೋನ್ ಬಳಸಿ ಇ-ಕೆವೈಸಿ ಮಾಡಲು ಸಾಧ್ಯವಾಗದವರು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬಹುದು. ಅಲ್ಲಿನ ಸಿಬ್ಬಂದಿ ‘AHARA’ ತಂತ್ರಾಂಶದ ಮೂಲಕ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.

ಹೀಗಾಗಿ ಕೊನೆಯ ದಿನದವರೆಗೆ ಕಾಯದೆ, ಕುಟುಂಬದ ಸದಸ್ಯರ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿ ಬಾಕಿ ಇರುವವರು ಆದಷ್ಟು ಬೇಗ ಪೂರ್ಣಗೊಳಿಸುವುದು ಉತ್ತಮ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories