Kannada Live: ಇಂದಿನ ಕನ್ನಡ ಟ್ರೆಂಡಿಂಗ್ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಲೈವ್ ಅಪ್‌ಡೇಟ್‌ಗಳು 23 01 2023
Live now : ಬ್ರೇಕಿಂಗ್ ನ್ಯೂಸ್ ಲೈವ್, ಇತ್ತೀಚಿನ ಸುದ್ದಿ ನವೀಕರಣಗಳು, ಪ್ರಮುಖ ಸ್ಥಳೀಯ ವಿಷಯಗಳು ಮತ್ತು ಘಟನೆಗಳನ್ನು ಒಳಗೊಂಡ ಕನ್ನಡ ಸುದ್ದಿ ಪ್ರಸಾರ
Kannada News Live (23 January 2023): ಇತ್ತೀಚಿನ ಕನ್ನಡ ಬ್ರೇಕಿಂಗ್ ನ್ಯೂಸ್ ಲೈವ್ ಅಪ್‌ಡೇಟ್‌ಗಳು (Updates), ಇಂದಿನ (Today) ಟ್ರೆಂಡಿಂಗ್ ಸುದ್ದಿಗಳು. ಬೆಂಗಳೂರು, ಕರ್ನಾಟಕ, ದೇಶ, ವಿದೇಶ ಸೇರಿದಂತೆ ಕ್ಷಣ ಕ್ಷಣದ ನೇರ ಪ್ರಸಾರ (Live Coverage). ಸಮಗ್ರವಾದ ಕವರೇಜ್ ನೊಂದಿಗೆ ಪ್ರಮುಖ ಮುಖ್ಯಾಂಶಗಳು (Headlines). ಪ್ರಮುಖ ಸ್ಥಳೀಯ (Local) ವಿಷಯಗಳು ಮತ್ತು ಘಟನೆಗಳನ್ನು ಒಳಗೊಂಡ ಸುದ್ದಿ ಪ್ರಸಾರ.
ವಿಶೇಷ ಪಡೆಗಳಿಂದ ಚಿರತೆ ಸೆರೆಗೆ ಕಾರ್ಯಾಚರಣೆ
ಈ ಸಂದರ್ಭದಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಮಠದಲ್ಲಿ ನಡೆಯುತ್ತಿರುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಈ ವೇಳೆ ಸುದ್ದಿಗಾರರು ಚಿರತೆ ಅಟ್ಟಹಾಸ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರವಾಗಿ ಅವರು ಮಾತನಾಡಿದರು.
ವಿಶೇಷ ಪಡೆ
ಟಿ.ನರಸೀಪುರದಲ್ಲಿ ಚಿರತೆ ದಾಳಿಗೆ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಮಾಹಿತಿ ಕೇಳಿ ನನಗೆ ಆಘಾತವಾಯಿತು. ಈ ಘಟನೆ ನಡೆಯಬಾರದಿತ್ತು. ಬಾಲಕನ ಕುಟುಂಬಕ್ಕೆ ನನ್ನ ಸಂತಾಪ. ಟಿ.ನರಸೀಪುರದಲ್ಲಿ ಕಳೆದ 4 ತಿಂಗಳಲ್ಲಿ ಚಿರತೆಗಳು ದಾಳಿ ನಡೆಸಿ 4 ಮಂದಿಯನ್ನು ಬಲಿ ಪಡೆದಿವೆ. ಅಲ್ಲಿ ಈಗಾಗಲೇ 2 ಚಿರತೆಗಳು ಸಿಕ್ಕಿಬಿದ್ದಿವೆ. ಈಗಲೂ ಚಿರತೆಗಳ ಓಡಾಟ ಇದೆ. ಜನವಸತಿ ಪ್ರದೇಶಗಳಿಗೆ ನುಗ್ಗಿ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿರುವ ಚಿರತೆಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದೇನೆ.
ಇತರೆ ಜಿಲ್ಲೆಗಳಿಂದ ವಿಶೇಷ ಭದ್ರತಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಅವರು ಕಾಡಿನಲ್ಲಿ ಚಿರತೆಗಳನ್ನು ಇಡಿಯುವ ಕಾರ್ಯದಲ್ಲಿ ತೊಡಗಿರುತ್ತಾರೆ. ಈ ವಿಶೇಷ ಪಡೆಗಳ ಮೂಲಕ ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು. ಚಿರತೆಗಳು ಓಡಾಡುವ ಗ್ರಾಮಗಳಲ್ಲಿ ಬಂದೂಕು ಹಿಡಿದ ವಿಶೇಷ ಪಡೆಗಳೂ ಭದ್ರತಾ ಕಾರ್ಯದಲ್ಲಿ ತೊಡಗಲಿವೆ. ಸಾರ್ವಜನಿಕರು ಜಾಗರೂಕರಾಗಿರಬೇಕು. ಚಿರತೆ ದಾಳಿಗೆ ಸಿಲುಕಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿ ಜತೆ ಮಾತನಾಡಿದ್ದೇನೆ. ಚಿರತೆ ಸೆರೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದರು.
Live
News Today Live Headlines
ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭಾರೀ ಸಿದ್ಧತೆ
ಕಾಂಗ್ರೆಸ್ ಗೆ ಪೈಪೋಟಿ ನೀಡಲು ಬಿಜೆಪಿ ಸಿದ್ಧತೆ
ಬಜೆಟ್ ನಲ್ಲಿ ಉಚಿತ ಘೋಷಣೆಗಳನ್ನು ಬಿಡುಗಡೆ ಮಾಡಲು ಬಿಜೆಪಿ ನಿರ್ಧಾರ
ಕಾಂಗ್ರೆಸ್ ನ ಅಸಾಧ್ಯ ಭರವಸೆಗಳು; ಬಸವರಾಜ ಬೊಮ್ಮಾಯಿ
Follow us On
Google News |