ಯಾಸಿನ್ ಮಲಿಕ್ ಪ್ರಕರಣ: ದೇಶವಿರೋಧಿ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ 19 ಆರೋಪಿಗಳ ಬಂಧನ
ಯಾಸಿನ್ ಮಲಿಕ್ ಮನೆ ಮುಂದೆ ದೇಶವಿರೋಧಿ ಘೋಷಣೆ ಕೂಗಿ ಕಲ್ಲು ತೂರಾಟ ನಡೆಸಿದ 19 ಆರೋಪಿಗಳ ಬಂಧನ
ಶ್ರೀನಗರ: ಮೇ 25 ರಂದು ಜಮ್ಮು ಮತ್ತು ಕಾಶ್ಮೀರದ ಮೈಸುಮಾದಲ್ಲಿರುವ ಯಾಸಿನ್ ಮಲಿಕ್ ಅವರ ಮನೆಯ ಹೊರಗೆ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಮತ್ತು ಕಲ್ಲು ತೂರಾಟ ನಡೆಸಿದ 19 ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಮೇ 26 ರಂದು 10 ಆರೋಪಿಗಳನ್ನು ಬಂಧಿಸಲಾಗಿತ್ತು . ಶ್ರೀನಗರ ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ಇನ್ನುಳಿದ ಆರೋಪಿಗಳನ್ನು ಗುರುತಿಸಲಾಗುತ್ತಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಶ್ರೀನಗರ ಪೊಲೀಸರು ತಿಳಿಸಿದ್ದಾರೆ. ಯುಎಪಿಎ ಮತ್ತು ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಗೂಂಡಾಗಿರಿಯ ಪ್ರಮುಖ ಪ್ರಚೋದಕರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ದಾಖಲಿಸಲಾಗುವುದು.
Jammu & Kashmir | 10 accused have been arrested so far for anti-national sloganeering & stone-pelting outside the home of Yasin Malik prior to sentencing in Maisuma yesterday. All other areas remained peaceful: Srinagar Police pic.twitter.com/3M1fSjreXG
— ANI (@ANI) May 26, 2022
ಮೇ 25 ರಂದು, ಶಿಕ್ಷೆ ಪ್ರಕಟಗೊಳ್ಳುವ ಮೊದಲು, ಕಾಶ್ಮೀರದಲ್ಲಿರುವ ಮಲಿಕ್ ಅವರ ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಜಮಾಯಿಸಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಬೆಂಬಲಿಗರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಬೇಕಾಯಿತು.
ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದರೊಂದಿಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಮಾಹಿತಿ ಪ್ರಕಾರ ಎರಡು ಪ್ರಕರಣಗಳಲ್ಲಿ ಮಲಿಕ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
19 accused have been arrested so far for anti-national sloganeering & stone-pelting outside the home of Yasin Malik