Madrasa: ಮದರಸಾದಲ್ಲಿ ಧಾರುಣ ಘಟನೆ, ಮಕ್ಕಳನ್ನು ಸರಪಳಿಯಿಂದ ಬಂಧಿಸಿದ ಮೌಲಾನಾ

Madrasa: ಲಕ್ನೋದ ಮದರಸಾದಿಂದ ಪಲಾಯನ ಮಾಡುವುದನ್ನು ತಡೆಯಲು ಇಬ್ಬರು ಮಕ್ಕಳನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಅವರ ಪೋಷಕರು ತಮ್ಮ ಇಬ್ಬರು ಮಕ್ಕಳನ್ನು ಮದರಸಾದಲ್ಲಿ ಓದಲು ಸೇರಿಸಿದ್ದರು.

ಯುಪಿಯ ಲಕ್ನೋದ ಮದರಸಾದಲ್ಲಿ (UP, Lucknow, Madrasa) ಧಾರುಣ ಘಟನೆ ನಡೆದಿದೆ. ಇಬ್ಬರು ಮಕ್ಕಳನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಬಾಲಕರ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗಿತ್ತು. ಘಟನೆಯ ವಿಡಿಯೋ ಪೊಲೀಸರ ಗಮನಕ್ಕೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ.

ಲಕ್ನೋದ ಮದರಸಾದಿಂದ ಪಲಾಯನ ಮಾಡುವುದನ್ನು ತಡೆಯಲು ಇಬ್ಬರು ಮಕ್ಕಳನ್ನು ಸರಪಳಿಯಿಂದ ಬಂಧಿಸಲಾಗಿತ್ತು. ಅವರ ಪೋಷಕರು ತಮ್ಮ ಇಬ್ಬರು ಮಕ್ಕಳನ್ನು ಮದರಸಾದಲ್ಲಿ ಓದಲು ಸೇರಿಸಿದ್ದರು. ಮಕ್ಕಳಿಬ್ಬರೂ ಮದರಸಾದಿಂದ ಓಡಿಹೋಗುತ್ತಾರೆ ಎಂದು ಅವರ ಪೋಷಕರು ಮೌಲಾನಾಗೆ ಒಪ್ಪಿಸಿದಾಗ, ಮೌಲಾನಾ (Maulana) ಮಕ್ಕಳಿಗೆ ಚೈನ್ ಹಾಕಿ ಬೀಗ ಹಾಕಿದ್ದರು.

ಈ ಕುರಿತು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಮದರಸಾಕ್ಕೆ ತೆರಳಿದ್ದರು. ಮಕ್ಕಳನ್ನು ಬಿಡುಗಡೆಗೊಳಿಸಿದ ಪೊಲೀಸರು ಈ ರೀತಿ ಸರಪಳಿ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

Madrasa: ಮದರಸಾದಲ್ಲಿ ಧಾರುಣ ಘಟನೆ, ಮಕ್ಕಳನ್ನು ಸರಪಳಿಯಿಂದ ಬಂಧಿಸಿದ ಮೌಲಾನಾ - Kannada News

ಈ ಬಗ್ಗೆ ಮಕ್ಕಳ ಪೋಷಕರು ಪೊಲೀಸರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಮೌಲಾನಾ ಅವರ ತಪ್ಪಿಲ್ಲ ಹಾಗೂ ತಾವೇ ತಮ್ಮ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿ ವರ್ತಿಸುವಂತೆ ಮೌಲಾನರಿಗೆ ಹೇಳಿರುವುದಾಗಿ ತಿಳಿಸಿದ್ದಾರೆ ಮತ್ತು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಮನವಿ ಮಾಡಿದ್ದಾರೆ. ಮಕ್ಕಳಿಗೆ ಓದಲು ಇಷ್ಟವಿಲ್ಲ ಎಂದ ಅವರು ಮದರಸಾದಿಂದ ಓಡಿ ಹೋಗುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ.

2 Boys Kept In Chains At Madrasa In Lucknow Goes Viral

Follow us On

FaceBook Google News