Yoga Day, ಯೋಗ ದಿನವನ್ನು ಉತ್ಸಾಹದಿಂದ ಆಚರಿಸಿ: ಪ್ರಧಾನಿ ಮೋದಿ ಕರೆ

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ವಾರ್ಷಿಕವಾಗಿ ಜೂನ್ 21 ರಂದು (on June 21) ಆಚರಿಸಲಾಗುತ್ತದೆ. ಈ ವರ್ಷದ ಯೋಗ ದಿನ ಮುಂದಿನ ತಿಂಗಳು ಬರಲಿದ್ದು, ಇದನ್ನು ಜನರು ಉತ್ಸಾಹದಿಂದ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
“ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತದೆ” ಎಂದು ಅವರು ನಿನ್ನೆ ರಾಷ್ಟ್ರದ ಜನರಿಗೆ ತಿಳಿಸಿದರು. ಈ ವರ್ಷ ಯೋಗ ದಿನವನ್ನು ಮಾನವೀಯತೆಗಾಗಿ ಯೋಗ ಎಂಬ ವಿಷಯದಡಿಯಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕೆಂದು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ… ಎಂದರು.
Celebrate Yoga Day with enthusiasm says Prime Minister Modi



