Watch Video, ಮೆಕ್‌ಡೊನಾಲ್ಡ್‌ನ ಕೂಲ್‌ಡ್ರಿಂಕ್‌ನಲ್ಲಿ ಹಲ್ಲಿ !
ಅಹಮದಾಬಾದ್‌ನ ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್‌ಡೊನಾಲ್ಡ್ ಗ್ರಾಹಕರ ಕೂಲ್‌ಡ್ರಿಂಕ್‌ನಲ್ಲಿ ಹಲ್ಲಿ ಕಾಣಿಸಿಕೊಂಡಿದೆ.
ಅಹಮದಾಬಾದ್‌ನ ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್‌ಡೊನಾಲ್ಡ್ (mcdonalds) ಗ್ರಾಹಕರ ಕೂಲ್‌ಡ್ರಿಂಕ್‌ನಲ್ಲಿ ಹಲ್ಲಿ (Dead lizard) ಕಾಣಿಸಿಕೊಂಡಿದೆ. ಕೂಲ್ ಡ್ರಿಂಕ್ ನೋಡಿದ ಗ್ರಾಹಕರು ಮಹಾನಗರ ಪಾಲಿಕೆಗೆ ವಿಷಯ ತಿಳಿಸಿದ್ದಾರೆ.
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಸ್ಥಳಕ್ಕೆ ಆಗಮಿಸಿ ಮೆಕ್ ಡೊನಾಲ್ಡ್ ಅನ್ನು ಸೀಲ್ ಮಾಡಿದರು. ಸಂಪೂರ್ಣ ವಿವರಗಳನ್ನು ಪರಿಶೀಲಿಸಿದಾಗ, .. ಇಬ್ಬರು ಸ್ನೇಹಿತರು ಮೆಕ್‌ಡೊನಾಲ್ಡ್‌ನಲ್ಲಿ ಕೂಲ್ಡ್ರಿಂಕ್ ಕುಡಿಯಲು ಆಗಮಿಸಿದ್ದರು. ಈ ಸಂದರ್ಭದಲ್ಲಿಯೇ ಸತ್ತ ಹಲ್ಲಿ ಕೂಲ್‌ಡ್ರಿಂಕ್‌ನಲ್ಲಿ ಕಂಡು ಬಂದಿದೆ.
ಇಬ್ಬರು ಯುವಕರು ಘಟನೆಯನ್ನು ಸ್ಥಳೀಯ ಪುರಸಭೆಗೆ ತಿಳಿಸಿದರು. ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಧಿಕಾರಿಗಳು ತಂಪು ಪಾನೀಯದ ಮಾದರಿಗಳನ್ನು ಸಂಗ್ರಹಿಸಿ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾರ್ವಜನಿಕ ಆರೋಗ್ಯದೊಂದಿಗೆ ಮೆಕ್‌ಡೊನಾಲ್ಡ್ ಆಟವಾಡುತ್ತಿರುವ ಕುರಿತು ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.
ಭಾರ್ಗವ ಜೋಶಿ ಎಂಬ ಗ್ರಾಹಕರು ಮೆಕ್‌ಡೊನಾಲ್ಡ್ ನೀಡಿದ ಕೂಲ್‌ಡ್ರಿಂಕ್‌ನಲ್ಲಿ ಸತ್ತ ಹಲ್ಲಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಎಎಂಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಮುಂದಿನ ಕ್ರಮದವರೆಗೆ ರೆಸ್ಟೋರೆಂಟ್ ಮುಚ್ಚುವಂತೆಯೂ ಆದೇಶಿಸಲಾಗಿದೆ. ಮಹಾನಗರ ಪಾಲಿಕೆಯ ಅನುಮತಿ ಇಲ್ಲದೆ ಪುನರಾರಂಭಿಸದಂತೆ ಆದೇಶವನ್ನೂ ಹೊರಡಿಸಲಾಗಿದೆ. ಅದೇ ಸಮಯದಲ್ಲಿ ಘಟನೆಯ ಕುರಿತು ಮೆಕ್‌ಡೊನಾಲ್ಡ್ ಪ್ರಮುಖ ಹೇಳಿಕೆಯನ್ನು ನೀಡಿದೆ.
ಮೆಕ್‌ಡೊನಾಲ್ಡ್ ತನ್ನ ಹೇಳಿಕೆಯಲ್ಲಿ .. ನಾವು ನಮ್ಮ ಗ್ರಾಹಕರ ಸುರಕ್ಷತೆ ಮತ್ತು ನೈರ್ಮಲ್ಯದ ಸಂಪೂರ್ಣ ಕಾಳಜಿ ವಹಿಸುತ್ತೇವೆ. ನಾವು ಅಹಮದಾಬಾದ್ ಔಟ್ಲೆಟ್ನಲ್ಲಿ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಜವಾಬ್ದಾರಿಯುತ ನಾಗರಿಕರಾಗಿ ಇಂತಹ ತಪ್ಪು ಹೇಗೆ ನಡೆದಿದೆ ಎಂಬ ಅಧಿಕಾರಿಗಳ ತನಿಖೆಗೆ ನಮ್ಮ ಕೈಲಾದ ಸಹಕಾರ ನೀಡುತ್ತೇವೆ ಎಂದಿದ್ದಾರೆ.
Here is video of this incidents happens with me…@McDonalds pic.twitter.com/UiUsaqjVn0
— Bhargav joshi (@Bhargav21001250) May 21, 2022
Dead lizard in cold drink of ahmedabad science city mcdonalds sealed
Follow Us on : Google News | Facebook | Twitter | YouTube