Nepal plane crash Update, ನೇಪಾಳ ವಿಮಾನ ಪತನ: ಇದುವರೆಗೆ 21 ಮೃತದೇಹಗಳು ಪತ್ತೆ

Nepal plane crash Update, ಮುಸ್ತಾಂಗ್ ಪ್ರಾಂತ್ಯದ ದಸಾಂಗ್-2ರ ಸನೋಸ್ವರ್ ಎಂಬ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಇದುವರೆಗೆ 21 ಮೃತದೇಹಗಳು ಪತ್ತೆಯಾಗಿದೆ.

Nepal plane crash Update, ಕಠ್ಮಂಡು: ಮುಸ್ತಾಂಗ್ ಪ್ರಾಂತ್ಯದ ದಸಾಂಗ್-2ರ ಸನೋಸ್ವರ್ ಎಂಬ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಇದುವರೆಗೆ 21 ಮೃತದೇಹಗಳು ಪತ್ತೆಯಾಗಿದೆ. ನಿನ್ನೆ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಿತ್ತು. ಕೆಲ ಗಂಟೆಗಳ ಹುಡುಕಾಟದ ಬಳಿಕ ವಿಮಾನ ಪತನಗೊಂಡಿರುವುದು ಪತ್ತೆಯಾಗಿದೆ.

ಮುಸ್ತಾಂಗ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಇದರ ಬೆನ್ನಲ್ಲೇ ಸೇನೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇದುವರೆಗೆ 21 ಮೃತದೇಹಗಳು ಪತ್ತೆಯಾಗಿವೆ. ಶವಪರೀಕ್ಷೆಗಾಗಿ ಕಠ್ಮಂಡುವಿಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಪ್ರದೇಶದಲ್ಲಿ 15 ನೇಪಾಳದ ಸೈನಿಕರ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ವಿಮಾನದಲ್ಲಿ 4 ಭಾರತೀಯರು, 2 ಜರ್ಮನ್ನರು, 13 ನೇಪಾಳದ ಪ್ರಯಾಣಿಕರು ಮತ್ತು 3 ಸಿಬ್ಬಂದಿ ಇದ್ದರು. ಇದುವರೆಗೆ 21 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದ ಒಬ್ಬರ ದೇಹವನ್ನು ಹುಡುಕುವಲ್ಲಿ ರಕ್ಷಣಾ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

Nepal plane crash Update, ನೇಪಾಳ ವಿಮಾನ ಪತನ: ಇದುವರೆಗೆ 21 ಮೃತದೇಹಗಳು ಪತ್ತೆ - Kannada News

Nepal plane crash 21 bodies recovered

Follow us On

FaceBook Google News