ಮುಂಬೈನಲ್ಲಿ ಕತ್ತಿ ಹಿಡಿದು ಅವಾಂತರ ಸೃಷ್ಟಿಸಿದ ನೈಜೀರಿಯಾ ವ್ಯಕ್ತಿ, 8 ಮಂದಿಗೆ ಗಾಯ

ಮುಂಬೈ: ಮುಂಬೈನ ಚರ್ಚ್‌ಗೇಟ್ ಪ್ರದೇಶದಲ್ಲಿ ನೈಜೀರಿಯಾದ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ಚಾಕುವಿನ ದಾಳಿ ನಡೆಸಿದ ಘಟನೆ ನಡೆದಿದೆ. ಪಾದಚಾರಿಗಳ ಮೇಲೆ ನಡೆದ ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.
ಪ್ಯಾರಿಸ್ ವೆಲ್ ನ ಟಾಟಾ ಗಾರ್ಡನ್ ಬಳಿ ಈ ಘಟನೆ ನಡೆದಿದೆ ಎಂದು ಎಸಿಪಿ ದಿಲೀಪ್ ಸಾವಂತ್ ಹೇಳಿದ್ದಾರೆ. ಚಾಕುವಿನಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು 50 ವರ್ಷದ ಜಾನ್ ಎಂದು ಗುರುತಿಸಲಾಗಿದೆ.
ಆತ ಏಕಾಏಕಿ ಜೇಬಿನಿಂದ ಚಾಕು ಹೊರತೆಗೆದು ಎದುರಿಗೆ ಬಂದ ಪಾದಚಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಬಂದು ಆತನನ್ನು ಬಂಧಿಸಿದ್ದಾರೆ. ದಾಳಿ ನಡೆದ ರಸ್ತೆಯಲ್ಲಿ ರಕ್ತದ ಕಲೆಗಳಿದ್ದವು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Nigerian Man Attacked Pedestrians With Knife In Mumbai 8 Injured



