ಅಮರನಾಥ ಯಾತ್ರೆಗೆ ಗುರಿ, ಪಾಕಿಸ್ತಾನದ ಸಂಚು ವಿಫಲಗೊಳಿಸಿದ ಪೊಲೀಸರು

ಅಮರನಾಥ ಯಾತ್ರೆಯನ್ನು ಗುರಿಯಾಗಿಸಲು ಪಾಕಿಸ್ತಾನ ರೂಪಿಸಿದ್ದ ಮತ್ತೊಂದು ಸಂಚನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಫಲಗೊಳಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಕಥುವಾ ಗ್ರಾಮವೊಂದರಲ್ಲಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಏಳು ಮ್ಯಾಗ್ನೆಟಿಕ್ ಬಾಂಬ್‌ಗಳು ಮತ್ತು ಏಳು ಯುಬಿಜಿಎಲ್ ಗ್ರೆನೇಡ್ ಲಾಂಚರ್‌ಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಪಡಿಸಿಕೊಂಡಿದೆ.
ಡ್ರೋನ್ ಚಲನವಲನಗಳನ್ನು ರಾಜಬಾಗ್ ಪೊಲೀಸ್ ಸರ್ಚ್ ಪಾರ್ಟಿ ಪತ್ತೆ ಮಾಡಿದೆ. ತಕ್ಷಣ ಗುಂಡು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದರು. ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ಬಾಂಬ್‌ಗಳನ್ನು ಸಾಗಿಸಲಾಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮ್ಯಾಗ್ನೆಟಿಕ್ ಬಾಂಬ್‌ಗಳನ್ನು ಚಾರ್ ದಾಮ್ ಯಾತ್ರಾ ಬಸ್‌ಗಳಿಗೆ ಅಳವಡಿಸಲು ಉದ್ದೇಶಿಸಲಾಗಿದೆ ಎಂದು ಶಂಕಿಸಲಾಗಿದೆ.
ಇವುಗಳನ್ನು ಹಿಂದೆ ತಾಲಿಬಾನಿಗಳು ಬಳಸುತ್ತಿದ್ದರು.ಯುನೈಟೆಡ್ ಸ್ಟೇಟ್ಸ್ನೊಂದಿಗಿನ ಶಾಂತಿ ಮಾತುಕತೆಗಳ ಸಮಯದಲ್ಲಿ ದಾಳಿಗಳಲ್ಲಿ ಅವುಗಳನ್ನು ವ್ಯಾಪಕವಾಗಿ ಬಳಸಲಾಗಿದೆ.
ಇದೀಗ ಅಮರನಾಥ ಯಾತ್ರೆಯಲ್ಲಿ ಇವುಗಳನ್ನು ಬಳಸಿಕೊಳ್ಳಲು ಪಾಕಿಸ್ತಾನದ ಐಎಸ್ ಐ ಸಂಚು ರೂಪಿಸಿದೆ. ಕಳೆದ ವರ್ಷ ಸಾಂಬಾ ಸೆಕ್ಟರ್‌ನಲ್ಲಿ ಇದೇ ರೀತಿಯ ಬಾಂಬ್‌ಗಳು ಪತ್ತೆಯಾಗಿದ್ದವು. ಭದ್ರತಾ ಪಡೆಗಳು ಪೂಂಚ್‌ನಲ್ಲಿ ನಾಲ್ಕು ಮ್ಯಾಗ್ನೆಟಿಕ್ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದವು. ಮತ್ತೆ ಈಗ ಇವು ಡ್ರೋನ್‌ಗಳ ಮೂಲಕ ಭಾರತವನ್ನು ತಲುಪುತ್ತಿವೆ ಎಂದು ತಿಳಿದು ಅಧಿಕಾರಿಗಳು ಎಚ್ಚರವಹಿಸಿದ್ದಾರೆ.
Pakistani Drone Carrying Magnetic Bombs Shot Down
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



