ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಎರಡು ದಿನಗಳ ಮಧ್ಯಪ್ರದೇಶ ಭೇಟಿ

ಭೋಪಾಲ್: ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರು ಎರಡು ದಿನಗಳ ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ (two-day visit to Madhya Pradesh). ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಮಾವೇಶದಲ್ಲಿ ಭಾಗವಹಿಸುವರು.
ರಾಷ್ಟ್ರಪತಿಗಳು ತಮ್ಮ ಭೇಟಿಯ ಭಾಗವಾಗಿ ಇದೇ ತಿಂಗಳ 27 ರಂದು ಭೋಪಾಲ್‌ಗೆ ಆಗಮಿಸಲಿದ್ದಾರೆ. 28ರಂದು ಭೂಪಾಲ್ ನಲ್ಲಿ ಆರೋಗ್ಯ ಸಂಸ್ಥೆಗಳ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ.
29ರಂದು ಭೋಪಾಲ್‌ನಿಂದ ಉಜ್ಜಯಿನಿಗೆ ತೆರಳಲಿದ್ದಾರೆ. ಇಲ್ಲಿ ಅವರು ಕಾಳಿದಾಸ ಅಕಾಡೆಮಿಯಲ್ಲಿ ಅಖಿಲ ಭಾರತ ಆಯುರ್ವೇದ ಸಮ್ಮೇಳನದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮಹಾಕಾಲ್ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ನಂತರ ಇಂದೋರ್ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ.
President Ramnath Kovind Will Visit Baba Mahakal



