ಸೋನಿಯಾ ಗಾಂಧಿ ಬೇಗ ಗುಣಮುಖರಾಗಲಿ – ಪ್ರಧಾನಿ ಮೋದಿ

ನವದೆಹಲಿ : ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ. ಸದ್ಯ ಅವರು ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದ ಸೋನಿಯಾ ಗಾಂಧಿ ಅವರಿಗೆ ನಿನ್ನೆ ಲಘು ಜ್ವರ ಕಾಣಿಸಿಕೊಂಡಿತ್ತು.
ನಂತರದ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಪ್ರತ್ಯೇಕಿಸಿ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಈ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿ ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೊರೊನಾ ಸೋಂಕಿನಿಂದ ಬೇಗ ಚೇತರಿಸಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.
Wishing Congress President Smt. Sonia Gandhi Ji a speedy recovery from COVID-19.
— Narendra Modi (@narendramodi) June 2, 2022
TRENDING ARTICLES1 / 5
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



