Story Highlights
ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಏರ್‌ಲೈನ್ ವ್ಯವಸ್ಥೆಗಳು ಮಂಗಳವಾರ ರಾತ್ರಿ ಸೈಬರ್ ದಾಳಿಗೆ ಒಳಗಾಗಿವೆ.
ನವದೆಹಲಿ: ಪ್ರಮುಖ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ಏರ್‌ಲೈನ್ ವ್ಯವಸ್ಥೆಗಳು ಮಂಗಳವಾರ ರಾತ್ರಿ ಸೈಬರ್ ದಾಳಿಗೆ ಒಳಗಾಗಿವೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಮಾನಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ.
ransomware ವೈರಸ್‌ನಿಂದ ಈ ದಾಳಿ ನಡೆದಿದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಸೈಬರ್ ದಾಳಿಯು ಬೆಳಗಿನ ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿದೆ.
ಆದರೆ, ತಕ್ಷಣ ಐಟಿ ತಂಡ ಕ್ರಮ ಕೈಗೊಂಡು ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ, ಇದೀಗ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದೆ. ಎಲ್ಲಾ ವಿಮಾನಗಳು ಸಾಮಾನ್ಯವಾಗಿ ಓಡುತ್ತಿವೆ ಎಂದು ವರದಿಯಾಗಿದೆ.
Spicejet Faces Ransomware Attack Flights Delayed