Tomato prices, ಎರಡು ವಾರಗಳಲ್ಲಿ ಟೊಮೇಟೊ ಬೆಲೆ ಇಳಿಕೆ: ಕೇಂದ್ರ

Tomato prices: ಇನ್ನು ಎರಡು ವಾರಗಳಲ್ಲಿ ದಕ್ಷಿಣ ರಾಜ್ಯಗಳಲ್ಲಿ ಟೊಮೇಟೊ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ತಿಳಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಹೆಚ್ಚುತ್ತಿರುವ ಟೊಮೆಟೊ ಬೆಲೆಯ ವಿಷಯದ ಬಗ್ಗೆ ಗಮನಹರಿಸಿದೆ.
ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಪ್ರಕಾರ, ಕೇಂದ್ರ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಎರಡು ವಾರಗಳಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಟೊಮೆಟೊ ಬೆಲೆಗಳು ಇಳಿಕೆಯಾಗಲಿದೆ. ಸದ್ಯ ದೇಶಾದ್ಯಂತ ಟೊಮೇಟೊ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿ. ಹಲವು ರಾಜ್ಯಗಳಲ್ಲಿ ಕೆಜಿ ಟೊಮೆಟೊ ಬೆಲೆ 50ರಿಂದ 106 ರೂ. ವರೆಗೆ ಮಾರಾಟವಾಗುತ್ತಿದೆ.
ಅಕಾಲಿಕ ಮಳೆ ಮತ್ತು ಹವಾಮಾನದಿಂದಾಗಿ ಟೊಮೇಟೊ ಬೆಳೆಗೆ ತೀವ್ರ ಹಾನಿಯಾಗಿದೆ. ಇದರಿಂದ ಇಳುವರಿ ಕುಸಿದು ದರ ಏರಿದೆ. ಸದ್ಯ ಒಂದು ಕೆಜಿ ಟೊಮೇಟೊ ಬೆಲೆ ದೆಹಲಿಯಲ್ಲಿ 40 ರೂ. ಕೋಲ್ಕತ್ತಾ ಮತ್ತು ಮುಂಬೈನಲ್ಲಿ 77 ರೂ. ಮತ್ತು ಚೆನ್ನೈನಲ್ಲಿ 60 ರೂ. ಇದ್ದರೆ… ದೆಹಲಿಯಲ್ಲಿ ಟೊಮೇಟೊ ಬೆಲೆ ಸ್ಥಿರವಾಗಿದ್ದರೂ, ದಕ್ಷಿಣದ ರಾಜ್ಯಗಳಲ್ಲಿ ಇದು ಹೆಚ್ಚಾಗಿದ್ದು, ಎರಡು ವಾರಗಳಲ್ಲಿ ಕುಸಿಯಲಿದೆ ಎಂದು ಸುಧಾಂಶು ಹೇಳಿದ್ದಾರೆ.
ಈ ಕುರಿತು ರಾಜ್ಯಗಳ ಜತೆಯೂ ಮಾತನಾಡುತ್ತಿರುವುದಾಗಿ ತಿಳಿಸಿದರು. ಮತ್ತೊಂದೆಡೆ ಈರುಳ್ಳಿ ಬೆಲೆ ಸ್ಥಿರವಾಗಿದ್ದು, ಈರುಳ್ಳಿ ಇಳುವರಿ ಗುರಿ ತಲುಪಿದೆ. ಈಗಾಗಲೇ 52,000 ಟನ್ ಈರುಳ್ಳಿ ಖರೀದಿ ಮಾಡಲಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಂಗ್ರಹವಾಗಿದೆ ಎಂದರು.
Tomato Prices To Stabilize In Southern States In Two Weeks
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



