ಜೊಮಾಟೊ ಅವಾಂತರ, ಮಟನ್ ಬಿರಿಯಾನಿ ಇಲ್ಲದ ಕಾರಣ ಮದುವೆ ಸ್ಥಗಿತ !

ಮದುವೆಯನ್ನು ಮುಂದೂಡುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಬಿರಿಯಾನಿ ಕೊರತೆಯೇ ಇದಕ್ಕೆ ಕಾರಣ ಎಂಬ ಮಾತು ಕೇಳಿ ಎಲ್ಲರೂ ಬೆಚ್ಚಿಬಿದ್ದರು.

Online News Today Team

ಮನೆಯೊಂದರಲ್ಲಿ ಅದ್ಧೂರಿಯಾಗಿ ಮದುವೆಯ ಕಾರ್ಯಕ್ರಮಗಳು ನಡೆಯುತ್ತಾ ಇದ್ದವು. ಸಂಬಂಧಿಕರು ಮತ್ತು ಸ್ನೇಹಿತರು ಎಲ್ಲರೂ ಸಂಭ್ರಮದಲ್ಲಿದ್ದರು… ಅತಿಥಿಗಳು ಒಳ್ಳೆಯ ಬಿರಿಯಾನಿಯೊಂದಿಗೆ ರಾತ್ರಿಯ ಊಟಕ್ಕೆ ತಯಾರಿಯಾಗಿದ್ದರು. ಎಲ್ಲವೂ ಚನ್ನಾಗಿಯೇ ಇತ್ತು…. ಆದರೆ, ಅಷ್ಟರಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆಯಿತು.

ದಿಡೀರನೆ ಮದುವೆಯನ್ನು ಮುಂದೂಡುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಬಿರಿಯಾನಿ ಕೊರತೆಯೇ ಇದಕ್ಕೆ ಕಾರಣ ಎಂಬ ಮಾತು ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಹೌದು, ತಮಿಳುನಾಡು ರಾಜ್ಯದಲ್ಲಿ ಈ ಘಟನೆ ನಡೆದಿದೆ. ಜೊಮಾಟೊ ನಿರ್ಲಕ್ಷ್ಯದಿಂದಲೇ ಇದೆಲ್ಲ ಸಂಭವಿಸಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿ ಮಾಹಿತಿ ಮತ್ತು ಮನೋರ್ನಜನೆಗಾಗಿ ವೆಬ್ ಸ್ಟೋರೀಸ್ ನೋಡಿ – Web Stories

ಸೇಲಂ ಆರ್ ಆರ್ ಬಿರಿಯಾನಿ ಸೆಂಟರ್ ನ ಆಯೋಜಕರು ತಮಿಳುನಾಡಿನಲ್ಲಿ ಮದುವೆಗೆ ನಾನ್ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದಾರೆ. ಜೊಮಾಟೊ 3,500 ಕೆಜಿ ಮಾಂಸವನ್ನು ಪೂರೈಸಿದೆ. ಬೆಂಗಳೂರಿನಿಂದ ತಮಿಳುನಾಡಿಗೆ ಪಾರ್ಸೆಲ್ ಮಾಡಿದ ಮಟನ್ ಮತ್ತು ಚಿಕನ್ ಗುಣಮಟ್ಟ ಬಹಳ ಕೆಟ್ಟದಾಗಿತ್ತು.

ಆನ್ ಲೈನ್ ಆರ್ಡರ್ ನಲ್ಲಿ ಟನ್ ಗಟ್ಟಲೆ ಕೊಳೆತ ಮಾಂಸ ಬಂದಿರುವ ಬಗ್ಗೆ ವಧುವಿನ ಕಡೆಯವರು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಪಾಸಣೆ ನಡೆಸಿದ ಅಧಿಕಾರಿಗಳು ಕೊಳೆತ ಮಾಂಸ ಎಂದು ತೀರ್ಮಾನಿಸಿದ್ದಾರೆ.

ಈ ಬಗ್ಗೆ ಜೊಮಾಟೊ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ವೇಳೆ ಬಂದಿದ್ದ ಬಂಧುಗಳಿಗೆ ಊಟ ನೀಡದೆ ಮದುವೆ ನಡೆಯಲು ಸಾಧ್ಯವಿಲ್ಲ ಎಂದು ವಧುವರರ ಕುಟುಂಬಸ್ಥರು ತಿಳಿಸಿದ್ದು, ಬಿರಿಯಾನಿ ಇಲ್ಲದ ಕಾರಣ ಮದುವೆ ಮುಂದೂಡಲಾಗಿದೆ.

Wedding Called Off Due To Lack Of Mutton Biryani

Follow Us on : Google News | Facebook | Twitter | YouTube