ಡಾಕ್ಟರ್ ಕಿಡ್ನಾಪ್ ಮಾಡಿ ಮದುವೆಗೆ ಒತ್ತಾಯ!
ವೈದ್ಯನನ್ನು ಅಪಹರಿಸಿ ಬಲವಂತವಾಗಿ ಮದುವೆ..
ಬಿಹಾರದಲ್ಲಿ ಮತ್ತೊಂದು ‘ಬಲವಂತದ ವಿವಾಹ’ ಘಟನೆ ನಡೆದಿದೆ. ಪಶುವೈದ್ಯರನ್ನು ಅಪಹರಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸಲಾಗಿದೆ. ರಾಜ್ಯದ ಬೇಗುಸರಾಯ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಪಶುವೈದ್ಯರನ್ನು ಕರೆದು ತಮ್ಮ ಪ್ರಾಣಿಗೆ ಅನಾರೋಗ್ಯವಿದೆ ಎಂದು ಹೇಳಿದರು. ಅವರು ಹೇಳಿದ ಮಾತಿಗೆ ಹೋದ ವೈದ್ಯನನ್ನು ಕಿಡ್ನಾಪ್ ಮಾಡಿ ನಂತರ ಬೆದರಿಕೆ ಹಾಕಿ ಹುಡುಗಿಯೊಬ್ಬಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ.
ವೈದ್ಯರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಲವಂತದ ಮದುವೆ ಎಂದರೆ ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮವಾಗಿರುವವರನ್ನು ಗುರಿಯಾಗಿಸಿ, ಅವರನ್ನು ಅಪಹರಿಸಿ ಮದುವೆಗೆ ಒತ್ತಾಯಿಸುವುದು.
ಬೇಗುಸರಾಯಿ ಠಾಣಾಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ಕಠಿಮ ಕ್ರಮ ಕೈಗೊಳ್ಳುತ್ತೇವೆ,” ಎಂದು ಬೇಗುಸರಾಯಿ ಎಸ್ಪಿ ಯೋಗೇಂದ್ರ ಕುಮಾರ್ ಹೇಳಿದ್ದಾರೆ.
ಉತ್ತರ ಭಾರತದಲ್ಲಿ ಅದರಲ್ಲೂ ಬಿಹಾರದಲ್ಲಿ ಈ ರೀತಿಯ ಮದುವೆ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅಪಹರಿಸಿ ಮದುವೆ ಮಾಡುವುದು ಅಥವಾ ಹುಡುಗನನ್ನು ಹಿಡಿದು ಮದುವೆ ಮಾಡಿಸುವುದು ಎಂದು ಇದಕ್ಕೆ ಕರೆಯುತ್ತಾರೆ. ಹಲವಾರು ಹಳ್ಳಿಗಳಲ್ಲಿ ಇದೇ ರೀತಿಯ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ.
Kidnapped A Doctor And Forced To Marry
Follow Us on : Google News | Facebook | Twitter | YouTube