ನಿಷೇಧಿತ ಪಟಾಕಿ ಸಿಡಿಸಿದ್ದ 600 ಮಂದಿ ಬಂಧನ! ಸುಮಾರು 700 ಕೆಜಿ ನಿಷೇಧಿತ ಪಟಾಕಿ ವಶ

Story Highlights

ನಿಷೇಧಿತ ಪಟಾಕಿ ಸಿಡಿಸುತ್ತಿದ್ದ ಸುಮಾರು 600 ಮಂದಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಷ್ಟು ಜನರನ್ನು ವಿವಿಧ ಕಾರಣಗಳಿಗಾಗಿ ಬಂಧಿಸಲಾಗಿದೆ.

ಕೋಲ್ಕತ್ತಾ: ನಿಷೇಧಿತ ಪಟಾಕಿ ಸಿಡಿಸುತ್ತಿದ್ದ ಸುಮಾರು 600 ಮಂದಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಷ್ಟು ಜನರನ್ನು ವಿವಿಧ ಕಾರಣಗಳಿಗಾಗಿ ಬಂಧಿಸಲಾಗಿದೆ.

ಸುಮಾರು 700 ಕೆಜಿ ನಿಷೇಧಿತ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರೊಂದಿಗೆ 80 ಲೀಟರ್ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದ 800 ಮಂದಿಯನ್ನು ಬಂಧಿಸಲಾಗಿದೆ.

ರೈಲು ಪ್ರಯಾಣಿಕರಿಗೆ ಬಿಗ್ ಅಲರ್ಟ್! ಇಂದಿನಿಂದ ಹೊಸ ನಿಯಮಗಳು

ಗುರುವಾರ ಕೋಲ್ಕತ್ತಾದಲ್ಲಿ ಕಾಳಿ ಪೂಜೆ ಮತ್ತು ದೀಪಾವಳಿ ಆಚರಣೆಗಳು ನಡೆದವು. ಇಂದು ಬೆಳಗ್ಗೆ 7 ಗಂಟೆಯವರೆಗೆ ಪಟಾಕಿ ಸಿಡಿಸಿದ 265 ಮಂದಿ, ಅನುಚಿತವಾಗಿ ವರ್ತಿಸಿದ 328 ಮಂದಿ ಹಾಗೂ ಜೂಜಾಡುತ್ತಿದ್ದ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಬಹಿರಂಗಪಡಿಸಿದ್ದಾರೆ.

296 ದ್ವಿಚಕ್ರ ವಾಹನ ಸವಾರರು, ಹೆಲ್ಮೆಟ್ ರಹಿತ 93  ಸವಾರರು, ಅತಿರೇಕವಾಗಿ ವಾಹನ ಚಲಾಯಿಸಿದ 93 ಹಾಗೂ ಕುಡಿದು ವಾಹನ ಚಲಾಯಿಸಿದ 90 ಮಂದಿಯನ್ನು ಬಂಧಿಸಲಾಗಿದೆ.

Kolkata police arrested around 600 people for bursting banned firecrackers

Related Stories