ರೈಲು ಪ್ರಯಾಣಿಕರಿಗೆ ಬಿಗ್ ಅಲರ್ಟ್! ಇಂದಿನಿಂದ ಹೊಸ ನಿಯಮಗಳು
ರೈಲ್ವೆ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ (Advance Booking) ಕೇವಲ 60 ದಿನಗಳು ಇತ್ತು. ಇದನ್ನು 25 ಮಾರ್ಚ್ 2015 ರಂದು 120 ದಿನಗಳಿಗೆ ಹೆಚ್ಚಿಸಲಾಯಿತು.
ರೈಲು ಟಿಕೆಟ್‌ಗಳ ಮುಂಗಡ ಕಾಯ್ದಿರಿಸುವಿಕೆಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲು ರೈಲ್ವೆ ಮಂಡಳಿ ಇತ್ತೀಚೆಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು , ಈ ಹೊಸ ನಿಯಮಗಳು (Train Ticket Booking Rule) ಇಂದಿನಿಂದ ಜಾರಿಗೆ ಬಂದಿದೆ.
ಹೊಸ ನಿಯಮಗಳ ಪ್ರಕಾರ.. ಇಂದಿನಿಂದ, ನೀವು ಟಿಕೆಟ್‌ಗಳನ್ನು ಕಾಯ್ದಿರಿಸಲು ಬಯಸಿದರೆ, 60 ದಿನಗಳಲ್ಲಿ ಪ್ರಯಾಣಕ್ಕಾಗಿ ಮುಂಗಡವಾಗಿ ರೈಲು ಟಿಕೆಟ್ ಕಾಯ್ದಿರಿಸುವ (Train Ticket Reservation Period) ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಆದರೆ, ಈಗಾಗಲೇ ಮುಂಗಡ ಕಾಯ್ದಿರಿಸಿರುವವರಿಗೆ (ರಿಸರ್ವೇಶನ್ ಅವಧಿ) ಈ ಹೊಸ ನಿಯಮಗಳು ಅನ್ವಯಿಸುವುದಿಲ್ಲ. ಅವರಿಗೆ 120 ದಿನಗಳ ಅವಧಿ ಅನ್ವಯಿಸುತ್ತದೆ.
ಈ ಮೊದಲು ರೈಲ್ವೆ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ (Advance Booking) ಕೇವಲ 60 ದಿನಗಳು ಇತ್ತು. ಇದನ್ನು 25 ಮಾರ್ಚ್ 2015 ರಂದು 120 ದಿನಗಳಿಗೆ ಹೆಚ್ಚಿಸಲಾಯಿತು. 120 ದಿನಗಳ ಮುಂಗಡ ಬುಕ್ಕಿಂಗ್ ಹೆಚ್ಚು ರದ್ದತಿಗೆ ಕಾರಣವಾಗುತ್ತಿದೆ ಮತ್ತು ಪ್ರಯಾಣ ರದ್ದತಿಯಿಂದಾಗಿ ಬರ್ತ್‌ಗಳು ವ್ಯರ್ಥವಾಗುತ್ತಿವೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಪ್ರಸ್ತುತ, 21 ಪ್ರತಿಶತದಷ್ಟು ಮುಂಗಡ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗುತ್ತಿದೆ, ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸುವ ಸಲುವಾಗಿ ಗಡುವು ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮುಂಗಡ ಬುಕ್ಕಿಂಗ್‌ಗೆ ಅಲ್ಪಾವಧಿಯ ಮಿತಿಯನ್ನು ಹೊಂದಿರುವ ತಾಜ್ ಎಕ್ಸ್‌ಪ್ರೆಸ್ ಮತ್ತು ಗೋಮತಿ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಬುಕಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ವಿದೇಶಿಗರು 365 ದಿನಗಳ ಮುಂಚಿತವಾಗಿ ರೈಲು ಟಿಕೆಟ್ ಕಾಯ್ದಿರಿಸುವ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಬಗ್ಗೆ ಕಳೆದ ತಿಂಗಳ 16ರಂದು ರೈಲ್ವೆ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದೆ.
New Train Ticket Booking Rule Comes Into Effect, Reservation Period Cut By 60 Days