Pink Lake Water, ಗುಲಾಬಿ ಬಣ್ಣಕ್ಕೆ ತಿರುಗಿದ ಕೆರೆಯ ನೀರು !

ಅಹಮದಾಬಾದ್: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಸುಗಮ್ ಗ್ರಾಮದ ಕೆರೆ ಗುಲಾಬಿ ಬಣ್ಣಕ್ಕೆ (Pink Lake Water) ಪರಿಸರ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇದು ದೇವರ ಮಹಿಮೆ ಎಂದು ಗ್ರಾಮಸ್ಥರು ಬೆರಗಾಗಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಈ ಕೆರೆಯ ನೀರು ಅಸಾಧಾರಣವಾಗಿ ಗುಲಾಬಿ ಬಣ್ಣಕ್ಕೆ ತಿರುಗಿದೆ.

ವಿಷಯ ತಿಳಿಯುತ್ತಿದ್ದಂತೆ ಸಮೀಪದ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆರೆಯಲ್ಲಿನ ನೀರು ನೋಡಲು ಮುಗಿಬಿದ್ದರು. ಮಳೆ ನೀರಿನಿಂದ ಕೆರೆ ತುಂಬಿದ್ದು, ಗ್ರಾಮಸ್ಥರು ವರ್ಷವಿಡೀ ನೀರು ಬಳಸುತ್ತಾರೆ. ಸಮೀಪದ ಮಹಾದೇವ ದೇವಸ್ಥಾನದ ನೈದಿಲೆಗಳಿರುವ ಕೊಳದಲ್ಲಿನ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ.

ಸ್ಥಳೀಯ ಅಧಿಕಾರಿಗಳು ಕೆರೆಯ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಸದ್ಯ ಕೆರೆ ನೀರನ್ನು ಯಾವುದೇ ಉದ್ದೇಶಕ್ಕೆ ಬಳಸದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ ಎಂದು ತಹಸಿಲ್ ಅಭಿವೃದ್ಧಿ ಅಧಿಕಾರಿ ಕೆ.ಎ.ಭಾಟಿಯಾ ತಿಳಿಸಿದ್ದಾರೆ. ಕೆರೆಯ ನೀರಿನಲ್ಲಿ ಬೇರೆ ಏನೋ ಬೆರೆತ ಕಾರಣ ರಾಸಾಯನಿಕ ಕ್ರಿಯೆಯಿಂದ ಕೆರೆಯ ನೀರು ಗುಲಾಬಿ ಬಣ್ಣಕ್ಕೆ ತಿರುಗಿದೆ ಎನ್ನುತ್ತಾರೆ ತಜ್ಞರು.

Lake Water Turns Pink In Gujarat Villagers Call It Miracle

TRENDING ARTICLES1 / 5
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ