LPG Cylinder Price: ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದುಬಾರಿ, ಹೊಸ ದರ ಗೊತ್ತಾ?
LPG Cylinder Price: ಹೊಸ ವರ್ಷದ ಮೊದಲ ದಿನವಾದ ಇಂದು ಎಲ್‌ಪಿಜಿ ಸಿಲಿಂಡರ್ ಬೆಲೆ ಜನಸಾಮಾನ್ಯರಿಗೆ ಮತ್ತೆ ಶಾಕ್ ನೀಡಿದೆ.
LPG Cylinder Price (Kannada News): ಹೊಸ ವರ್ಷದ ಮೊದಲ ದಿನವಾದ ಇಂದು ಎಲ್‌ಪಿಜಿ ಸಿಲಿಂಡರ್ ಬೆಲೆ ಜನಸಾಮಾನ್ಯರಿಗೆ ಮತ್ತೆ ಶಾಕ್ ನೀಡಿದೆ. 2023 ರ ಮೊದಲ ದಿನದಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ (domestic gas cylinders) ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ (commercial gas cylinders) ಇಂದು ಏರಿಕೆ ಕಂಡಿದೆ (Price Hikes).
ಎಲ್‌ಪಿಜಿ ಸಿಲಿಂಡರ್ ಬೆಲೆ
ಹೌದು, ಇಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಈ ಬಾರಿ 24 ರೂ.ನಿಂದ 25.5 ರೂ.ಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಕಳೆದ ವರ್ಷ 2022 ರಲ್ಲಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 4 ಬಾರಿ ಏರಿಕೆಯಾಗಿದ್ದರೂ, ಜುಲೈ 2022 ರಿಂದ, ಅದರಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ.
ಇಂದು ದೇಶದ ನಾಲ್ಕು ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಎಷ್ಟಾಗಿದೆ ಎಂಬುದನ್ನು ಸಹ ತಿಳಿಳೋಣ.
ದೆಹಲಿ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 25 ರೂ.ಗಳ ಏರಿಕೆಯಿಂದಾಗಿ ಇದೀಗ ಬೆಲೆ 1769 ರೂ.
ಕೋಲ್ಕತ್ತಾ: ಇಲ್ಲಿನ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 24 ರೂ.ಗಳ ಹೆಚ್ಚಳದಿಂದಾಗಿ ಇದೀಗ 1869.5 ರೂ.
ಮುಂಬೈ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 25 ರೂ.ಗಳ ಹೆಚ್ಚಳದಿಂದಾಗಿ ಇದೀಗ ಅದರ ಬೆಲೆ 1721 ರೂ.ಗೆ ಏರಿಕೆಯಾಗಿದೆ.
ಚೆನ್ನೈ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 25.5 ರೂಪಾಯಿ ಏರಿಕೆಯಾಗಿದ್ದು, ಈಗ 1917 ರೂ.
ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ದೆಹಲಿ: ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರಸ್ತುತ 1053 ರೂ.
ಕೋಲ್ಕತ್ತಾ: ಜುಲೈನಿಂದ ಇಲ್ಲಿ ಬೆಲೆ ಕೇವಲ 1079 ರೂ.
ಮುಂಬೈ: ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1052.50
ಚೆನ್ನೈ: ಸದ್ಯಕ್ಕೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಗೆ ಕೇವಲ 1068.50 ರೂ.
Latest prices of commercial and domestic LPG Gas Cylinders
Follow us On
Google News |