ಚಿರತೆ ಹಿಡಿದು ಕತ್ತು ಹಿಸುಕಿ ಕೊಂದ ಜನರು, ವಿಡಿಯೋ ವೈರಲ್
ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಚಿರತೆಯನ್ನು ಸ್ಥಳೀಯರು ಹಿಡಿದು ಕತ್ತು ಹಿಸುಕಿ ಕೊಲ್ಲಲಾಗಿದೆ, ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಕ್ನೋ: ಹಲವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆಯನ್ನು ಸ್ಥಳೀಯರು ಹಿಡಿದು ಚಿತ್ರಹಿಂಸೆ ಕೊಟ್ಟು ಕತ್ತು ಹಿಸುಕಿ (Leopard Strangled) ಕೊಂದಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನೌತನ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ಡಾ ತೋಲಾ ಲಾಲ್‌ಪುರ ಗ್ರಾಮದ ಬಳಿ ಮಂಗಳವಾರ ಚಿರತೆ ಕಾಣಿಸಿಕೊಂಡಿತ್ತು, ಕೆಲವು ಯುವಕರು ಅದನ್ನು ಹಿಂಬಾಲಿಸಿದ್ದಾರೆ.
ಇದೆ ವೇಳೆ ಚಿರತೆ ರೋಹಿನ್ ನದಿಗೆ ಹಾರಿದೆ, ಅಷ್ಟಕ್ಕೂ ಬಿಡದ ಕೆಲವರು ಆ ನದಿಗೆ ಇಳಿದು ವಯೋಸಹಜವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಚಿರತೆಯನ್ನು ಹಿಡಿದಿದ್ದಾರೆ, ಬಳಿಕ ಕೆಲ ಯುವಕರು ಚಿರತೆಯ ಕತ್ತು ಹಿಸುಕಿ ಕೊಂದಿದ್ದಾರೆ. ಇದನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ, ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿರತೆಯ ಕತ್ತು ಹಿಸುಕಿ ಕೊಂದಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಂದಿಸಿದ್ದಾರೆ. ಚಿರತೆಯ ದೇಹವನ್ನು ಗೋರಖ್‌ಪುರ ಮೃಗಾಲಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಯಸ್ಸಾದ ಕಾರಣ ಬಲಹೀನವಾಗಿದ್ದ ಚಿರತೆಯನ್ನು ಕತ್ತು ಹಿಸುಕಿ ಕೊಂದವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Leopard Dies After Locals Nab And Strangle It In Uttar Pradesh Maharajganj Video Goes Viral
The self-reliant villagers in Lalpur, Maharajganj, captured a leopard after forest officials failed to act. Their brave efforts went viral, prompting official intervention. Kudos to their adventurous spirit!
💪 https://t.co/mA7S0PgKKc— VIKAS THAKUR ‘क्षत्रिय’ (@vikas6918) December 3, 2024