LIVE Live Update: ರಾಷ್ಟೀಯ ಸುದ್ದಿಗಳ ಲೈವ್ ಅಪ್ಡೇಟ್, ದೇಶ ವಿದೇಶ ಸುದ್ದಿಗಳು

Story Highlights

Live News: ದೇಶದ ಈ ದಿನದ ಪ್ರಮುಖ ರಾಷ್ಟ್ರೀಯ ಸುದ್ದಿಗಳು, ಲೈವ್ ಅಪ್ಡೇಟ್ ಗಳು..

Live News Update (29-11-2024): ಇಂದಿನ ಪ್ರಮುಖ ಸುದ್ದಿಗಳು ಸೇರಿದಂತೆ ಕ್ಷಣ ಕ್ಷಣದ ಲೈವ್ ಅಪ್ಡೇಟ್ ಗಳನ್ನು ಪಡೆಯಿರಿ, ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ Live News Coverage ಇಲ್ಲಿದೆ. ದೇಶಾದ್ಯಾಂತ ಹಾಗೂ ಜಗತ್ತಿನಾದ್ಯಾಂತ ನಡೆಯುವ ಪ್ರಮುಖ ಘಟನೆಗಳ ಮಾಹಿತಿ ತಕ್ಷಣವೇ ಪಡೆಯಿರಿ. ನಮ್ಮ ಲೈವ್‌ ಕವರೆಜ್ ಮೂಲಕ ನವೀಕರಣಗಳು (Real-Time Updates).

ನವೆಂಬರ್ 29, 2024 10:00 ಅಪರಾಹ್ನ

ಅರಬ್ಬಿ ಸಮುದ್ರದಲ್ಲಿ 500 ಕೆಜಿ ಮಾದಕ ವಸ್ತು ವಶ

ಭಾರತ ಮತ್ತು ಶ್ರೀಲಂಕಾ ನೌಕಾಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಎರಡು ದೋಣಿಗಳಲ್ಲಿ ಸಾಗಿಸುತ್ತಿದ್ದ 500 ಕೆಜಿ ಅಕ್ರಮ ಮಾದಕ ದ್ರವ್ಯಗಳನ್ನು ಗುರುತಿಸಿ ವಶಪಡಿಸಿಕೊಂಡಿದ್ದಾರೆ. ಶ್ರೀಲಂಕಾ ಧ್ವಜವುಳ್ಳ ಎರಡು ಮೀನುಗಾರಿಕಾ ದೋಣಿಗಳಲ್ಲಿ ಕಳ್ಳಸಾಗಣೆಯಾಗುತ್ತಿದ್ದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ನ.24 ಮತ್ತು 25ರಂದು ನಡೆಸಿದ... View More

ನವೆಂಬರ್ 29, 2024 9:04 ಅಪರಾಹ್ನ

ಶಬರಿಮಲೆ ಮೆಟ್ಟಿಲುಗಳ ಮೇಲೆ ಫೋಟೋ ತೆಗೆಸಿಕೊಂಡ 23 ಪೊಲೀಸರಿಗೆ ಶಿಕ್ಷೆ ಏನು ಗೊತ್ತಾ?

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪವಿತ್ರ 18 ಮೆಟ್ಟಿಲುಗಳ ಮೇಲೆ 23 ಪೊಲೀಸರು ಗ್ರೂಪ್ ಫೋಟೋ (Sabarimala Photo Shoot) ತೆಗೆದಿರುವ ಘಟನೆಯಲ್ಲಿ ಸರ್ಕಾರ ಶಿಸ್ತು ಕ್ರಮ ಕೈಗೊಂಡಿದೆ. ಪೊಲೀಸರು ತಕ್ಷಣ ಸರಿಯಾದ ನಡವಳಿಕೆಗಾಗಿ ಕಠಿಣ ತರಬೇತಿ ಪಡೆಯಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಎಸ್‌ಎಪಿ ಶಿಬಿರದ... View More

ನವೆಂಬರ್ 29, 2024 7:58 ಅಪರಾಹ್ನ

ಜೈಲಿನಲ್ಲಿದ್ದ ಗರ್ಭಿಣಿ ಮಹಿಳೆಗೆ ಆರು ತಿಂಗಳ ತಾತ್ಕಾಲಿಕ ಜಾಮೀನು

ಮುಂಬೈ (Mumbai): ಜೈಲಿನಲ್ಲಿ ಹೆರಿಗೆ ಮಾಡುವುದರಿಂದ ತಾಯಿ ಹಾಗೂ ಮಗುವಿನ ಮೇಲೂ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಖೈದಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯೂ ಘನತೆಗೆ ಅರ್ಹರು ಎಂದು ಅದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಪೂರ್ಣ ಗರ್ಭಿಣಿ ಮಹಿಳೆಗೆ ಹೆರಿಗೆಗಾಗಿ ಆರು ತಿಂಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಲಾಗಿದೆ... View More

ನವೆಂಬರ್ 29, 2024 7:55 ಅಪರಾಹ್ನ

ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ, 11 ಪ್ರಯಾಣಿಕರು ಸಾವು

ಮಹಾರಾಷ್ಟ್ರದಲ್ಲಿ (Maharashtra) ಭೀಕರ ರಸ್ತೆ ಅಪಘಾತ (Bus Accident) ಸಂಭವಿಸಿದೆ. ಬೈಕ್ ತಪ್ಪಿಸುವ ಭರದಲ್ಲಿ ಬಸ್ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗೊಂಡಿಯಾ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಕೊಹ್ಮಾರಾ ಹೆದ್ದಾರಿಯಲ್ಲಿ ಭಂಡಾರಿಯಿಂದ ಗೊಂಡಿಯಾಗೆ ಹೋಗುತ್ತಿದ್ದ ಬಸ್‌ಗೆ ಬೈಕ್‌ ಎದುರಾಗಿದೆ. ಚಾಲಕ... View More
Related Stories