ಮತ್ತೊಬ್ಬನ ಜೊತೆ ಗೆಳತಿಯ ಮದುವೆ, ಬಾಯ್ ಫ್ರೆಂಡ್ ಎಂಟ್ರಿಯಿಂದ ಬದಲಾದ ಸೀನ್
ಬಿಹಾರದ ಮುಬಾರಕ್ ಪುರದಲ್ಲಿ ನಡೆದ ಘಟನೆಯ ವಿವರಕ್ಕೆ ಹೋದರೆ ಮದುವೆ ಮಂಟಪ ಕಿಕ್ಕಿರಿದು ತುಂಬಿತ್ತು
ಬಿಹಾರದ ಮುಬಾರಕ್ ಪುರದಲ್ಲಿ ನಡೆದ ಘಟನೆಯ ವಿವರಕ್ಕೆ ಹೋದರೆ ಮದುವೆ ಮಂಟಪ ಕಿಕ್ಕಿರಿದು ತುಂಬಿತ್ತು… ಅಷ್ಟರಲ್ಲಿ ಮುಖೇಶ್ ಕುಮಾರ್ ಎಂಬ ಯುವಕ ಪ್ರತ್ಯಕ್ಷನಾದ.. ಕೂಡಲೇ ವಧುವಿನ ಬಳಿ ಬಂದು ಸಿಂಧೂರ ಇಟ್ಟ.. ಬೆಚ್ಚಿಬಿದ್ದ.. ಅಲ್ಲೇ ಇದ್ದ ಮಹಿಳೆ ಮುಖೇಶ್ ಕೆನ್ನೆಗೆ ಬಾರಿಸಿದ್ದಾಳೆ.. ನಂತರ ವಧುವಿನ ಸಂಬಂಧಿಕರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಮುಖೇಶ್ ಕುಮಾರ್ ನನ್ನ ತೀವ್ರವಾಗಿ ಥಳಿಸಿದ್ದಾರೆ.. ಈ ವೇಳೆ ಮುಖೇಶ್ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿವೆ. ನಂತರ ಮದುವೆಗೆ ಬಂದಿದ್ದ ಹಿರಿಯರು ಊರವರ ನೆರವಿನಿಂದ ಆಸ್ಪತ್ರೆಗೆ ಸೇರಿಸಲಾಯಿತು. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ಬಗ್ಗೆ ವಧುವಿನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಮುಖೇಶ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆದ್ರೆ ಪೊಲೀಸರ ತನಿಖೆಯಲ್ಲಿ ಅಸಲಿ ಕಥೆ ಹೊರಬಿದ್ದಿದೆ. ಯುವಕ ಹೇಳಿದ ಮಾತುಗಳಿಂದ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ತಾನು ಮತ್ತು ಆಕೆ ಒಂದು ವರ್ಷದಿಂದ ಪ್ರೀತಿಸುತ್ತಿದ್ದೇವೆ… ಅಲ್ಲದೇ ವಧು ನನಗೆ ಕರೆ ಮಾಡಿ ಮದುವೆಗೆ ಬರುವಂತೆ ಹೇಳಿದ್ದು, ಮದುವೆಯ ಸಂದರ್ಭದಲ್ಲಿ ಹಣೆಗೆ ಸಿಂಧೂರ ಇಡಲು ಯೋಜಿಸಲಾಗಿತ್ತು.. ಅದಕ್ಕೇ ಮದುವೆಯಲ್ಲಿ ಆ ರೀತಿ ಮಾಡಿದೆ ಎಂದು ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
Lover Puts Sindoor On Her Forehead In Front Of Groom On Wedding Day
प्रेमिका ने प्रेमी से कहा कि मेरी शादी के बीच में आकर सिंदूर लगा देना. प्रेमी ने बिलकुल वैसा ही किया. लेकिन प्रेमिका ने ये नहीं बताया कि उसके बाद क्या करना है?
सिंदूरकांड के बाद लड़की के घरवालों ने प्रेमी की पिटाई कर दी. लड़का अस्पताल में है, दोनों तरफ से थाने में शिकायत दी गई. pic.twitter.com/04wMZuRJ6O
— Utkarsh Singh (@UtkarshSingh_) July 7, 2022
Follow Us on : Google News | Facebook | Twitter | YouTube