16 ಗಂಟೆಗಳ ರಕ್ಷಣಾ ಕಾರ್ಯ ವಿಫಲ, ಬೋರ್‌ವೆಲ್‌ಗೆ ಬಿದ್ದು ಬಾಲಕ ಸಾವು

10 ವರ್ಷದ ಬಾಲಕ ಕೊಳವೆಬಾವಿಗೆ ಬಿದ್ದು ಸಾವು, ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಘಟನೆ. 16 ಗಂಟೆಗಳ ಕಾಲ ಸತತ ಪ್ರಯತ್ನಪಟ್ಟರು ಬದುಕುಳಿಯದ ಬಾಲಕ

Madhya Pradesh : ಮಧ್ಯಪ್ರದೇಶದಲ್ಲಿ ಬೋರ್‌ವೆಲ್‌ಗೆ (Borewell) ಬಿದ್ದು 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಅಧಿಕಾರಿಗಳ 16 ಗಂಟೆಗಳ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದೆ. ಬಾಲಕನನ್ನು ಹೊರತರಲು ಅಧಿಕಾರಿಗಳು ಗಂಟೆಗಟ್ಟಲೆ ಶ್ರಮಿಸಿದರು ಯಾವುದೇ ಪ್ರಯೋಜನವಾಗಲಿಲ್ಲ. ಭಾನುವಾರ ಸುಮಿತ್ ಮೀನಾ ಎಂಬ ಬಾಲಕನ ಸಾವನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಮಧ್ಯಪ್ರದೇಶದ ಗುನಾ ಜಿಲ್ಲೆಯ ರಾಘೋಘರ್‌ನ ಜಾಂಜಲಿ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ 3.30 ಬಾಲಕ ಕೊಳವೆಬಾವಿಗೆ ಬಿದ್ದ ವಿಷಯ ತಿಳಿದ ಕೂಡಲೇ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಬಾಲಕನನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಗಿದ್ದು, ಬಾಲಕ 39 ಅಡಿ ಆಳದಲ್ಲಿ ಸಿಲುಕಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ.

ಬಾಲಕನನ್ನು ರಕ್ಷಿಸಲು ರಕ್ಷಣಾ ತಂಡಗಳು 40 ಅಡಿ ಸಮಾನಾಂತರ ಹೊಂಡವನ್ನು ಅಗೆದಿದ್ದವು. ಮಗುವಿಗೆ ಆಮ್ಲಜನಕವನ್ನೂ ನೀಡಲಾಗಿತ್ತು. ಘಟನಾ ಸ್ಥಳದಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿತ್ತು. 16 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯ ಮೂಲಕ ಬಾಲಕನನ್ನು ಹೊರ ತರಲಾಯಿತು. ಆದರೆ ಆಗಲೇ ಬಾಲಕ ಮೃತಪಟ್ಟಿದ್ದ.

16 ಗಂಟೆಗಳ ರಕ್ಷಣಾ ಕಾರ್ಯ ವಿಫಲ, ಬೋರ್‌ವೆಲ್‌ಗೆ ಬಿದ್ದು ಬಾಲಕ ಸಾವು

Madhya Pradesh Boy Tragically Dies After Being Stuck in 39-Foot Borewell for 16 Hours

Related Stories