ಅನ್ನ ಮಾಡೋಕೆ ಇನ್ಮೇಲೆ ಬಿಸಿ ನೀರಿನ ಅವಶ್ಯಕತೆ ಇಲ್ಲ. ಈ ಅಕ್ಕಿಯಿಂದ ತಣ್ಣೀರಲ್ಲೇ ಅನ್ನ ಮಾಡಿ.

ಅನ್ನ ಮಾಡುವುದಕ್ಕೆ ಬಿಸಿ ನೀರು ಅಗತ್ಯ. ಆದರೆ ಬಿಸಿ ನೀರು ಇಲ್ಲದೆಯೇ ಅನ್ನ ಮಾಡುವುದು ಹೇಗೆ ಗೊತ್ತಾ?

ನಮ್ಮದು ಕೃಷಿ ಅವಲಂಬಿತ ದೇಶ, ಇಲ್ಲಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಸಾಕಷ್ಟು ಜನ ರೈತರು ಕೃಷಿಯನ್ನೇ (Agriculture) ಅವಲಂಬಿಸಿದ್ದಾರೆ. ಕೃಷಿಯಲ್ಲಿ ಕೂಡ ಆಗಾಗ ಹೊಸ ವಿಚಾರಗಳು, ಹೊಸ ಆವಿಷ್ಕಾರಗಳು ಬೆಳಕಿಗೆ ಬರುತ್ತದೆ. ಇನ್ನು ನಮ್ಮ ಕರ್ನಾಟಕ (Karnataka) ರಾಜ್ಯದ ಕೃಷಿ ಬಗ್ಗೆ ಹೇಳುವುದಾದರೆ, ನಮ್ಮ ರಾಜ್ಯದಲ್ಲಿ ಅಕ್ಕಿ (Rice) ಮುಖ್ಯವಾದ ಧಾನ್ಯ, ನಮ್ಮಲ್ಲಿ ಹೆಚ್ಚಿನ ಜನರು ಪ್ರತಿದಿನ ಅಕ್ಕಿ ಸೇವಿಸುತ್ತಾರೆ.

ಅಕ್ಕಿಯ ಬೆಳೆಯಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಬೇರೆ ಬೇರೆ ತಳಿಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಹಾಗಾಗಿ ಅನ್ನ ತಿನ್ನುವವರಿಗೆ ಸಾಕಷ್ಟು ಆಯ್ಕೆಗಳಿವೆ. ಅವುಗಳಲ್ಲಿ ಸಾಮಾನ್ಯವಾಗಿ ಕೇಳುವುದು ಬಾಸ್ಮತಿ (Basmati), ರೆಡ್ ರೈಸ್ Red Rice) ಹೀಗೆ ಸಾವಿರಾರು ತಳಿಯ ಅಕ್ಕಿ ಬೆಳೆಯನ್ನು ಬೆಳೆಯುತ್ತಾರೆ.

ಯಾವುದೇ ತಳಿಯ ಅಕ್ಕಿ ಆದರೂ, ಅನ್ನ ಮಾಡುವುದಕ್ಕೆ ಬಿಸಿ ನೀರು ಅಗತ್ಯ. ಅಕ್ಕಿ ಮಾಡುವುದಕ್ಕೂ ಕೆಲವು ವಿಧಗಳಿವೆ, ಕೆಲವರು ಬಿಸಿ ನೀರು ಕುದಿಸಿ, ಅದರ ಮೂಲಕ ಅನ್ನ ಮಾಡುತ್ತಾರೆ, ಇನ್ನು ಕೆಲವು ಜನರು ಕುಕ್ಕರ್ ನಲ್ಲಿ ಅಕ್ಕಿ ಮಾಡುತ್ತಾರೆ.. ಆದರೆ ಬಿಸಿ ನೀರು ಇಲ್ಲದೆಯೇ ಅನ್ನ ಮಾಡುವುದು ಹೇಗೆ ಗೊತ್ತಾ?

ಅನ್ನ ಮಾಡೋಕೆ ಇನ್ಮೇಲೆ ಬಿಸಿ ನೀರಿನ ಅವಶ್ಯಕತೆ ಇಲ್ಲ. ಈ ಅಕ್ಕಿಯಿಂದ ತಣ್ಣೀರಲ್ಲೇ ಅನ್ನ ಮಾಡಿ. - Kannada News

ಈಸ್ಟ್ ಬಿಹಾರದಲ್ಲಿ (Bihar) ಈಗ ಹೊಸ ತಳಿಯ ಅಕ್ಕಿಯನ್ನು ಬೆಳೆಯಲಾಗುತ್ತಿದೆ, ಈ ಅಕ್ಕಿಯ ಹೆಸರು ಮ್ಯಾಜಿಕ್ ರೈಸ್ (Magic Rice). ಈ ಅಕ್ಕಿಯನ್ನು ಅನ್ನ ಮಾಡಲು ತಣ್ಣೀರು ಸಾಕು ಎಂದರೆ ಆಶ್ಚರ್ಯಪಡಬಹುದು. ಕೋಟೋಯ ಬ್ಲಾಕ್ ನಲ್ಲಿರುವ ಗೋಪಿ ಚಾಪ್ರ ಪಂಚಾಯತ್ ಗೆ ಸೇರಿದ, ಸಾಗರ್ ಚೂಡಾಮನ್ ಗ್ರಾಮದಲ್ಲಿ ವಾಸ ಮಾಡುವ ರೈತ ಪ್ರಯಾಗ್ ದೇವ್ ಸಿಂಗ್ (Prayag Dev Singh) ಅಸ್ಸಾಂ (Assam) ಮೂಲಕ ಮ್ಯಾಜಿಕ್ ರೈಸ್ ತಳಿಯ ಅಕ್ಕಿಯನ್ನು ಬೆಳೆಯುತ್ತಿದ್ದಾರೆ.

ಇವರು ಅಕ್ಕಿಯನ್ನು ಬೆಳೆದು ಅದರಿಂದ ಬಂದಿರುವ ಯಶಸ್ಸನ್ನು ನೋಡಿ, ಬೇರೆ ರೈತರು ಕೂಡ ಇದೇ ತಳಿಯ ಅಕ್ಕಿಯನ್ನು ಬೆಳೆಯಲು ಶುರು ಮಾಡಿದ್ದಾರೆ. ಮ್ಯಾಜಿಕ್ ರೈಸ್ ಎಂದು ಕರೆಯುವ ಈ ಅಕ್ಕಿ ತಳಿಯ ಮೂಲ ಹೆಸರು ಬೋಕಾ ಚಕುವಾ ರೈಸ್, ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ಕಣಿವೆಯಲ್ಲಿ ಈ ಅಕ್ಕಿಯನ್ನು ಹೆಚ್ಚಾಗಿ ಬೆಳಯಲಾಗುತ್ತದೆ.

ಈ ಅಕ್ಕಿಗೆ ನಮ್ಮ ದೇಶದ GI Tag ಸಹ ಸಿಕ್ಕಿದೆ. ಮ್ಯಾಜಿಕ್ ರೈಸ್ ನಲ್ಲಿ ಅತಿಹೆಚ್ಚು ಫೈಬರ್ ಅಂಶ ಇರುವುದರಿಂದ ಈ ವಿಶೇಷತೆ ಬಂದಿದೆ, ಮ್ಯಾಜಿಕ್ ರೈಸ್ ಅನ್ನು 1 ಗಂಟೆಗಳ ಕಾಲ ತಣ್ಣೀರಿನಲ್ಲಿ ಇಟ್ಟರೆ, ಅನ್ನವಾಗಿ ಬೆಂದಿರುತ್ತದೆ. ಕೇವಲ ಮೂರು ದಿನ ಈ ಅಕ್ಕಿಯನ್ನು ಸೇವಿಸಿದರೆ, ನಾಲ್ಕನೇ ದಿನದಿಂದಲೇ ನೀವು ಬದಲಾವಣೆ ಕಾಣಬಹುದು ಎಂದು ರೈತರು ಹೇಳಿದ್ದಾರೆ.

Magic rice techniques to boil rice ಈ ಮ್ಯಾಜಿಕ್ ರೈಸ್ ಅನ್ನು ಸಾಮಾನ್ಯವಾಗಿ ತಗ್ಗು ಪ್ರದೇಶಗಳಲ್ಲಿ ಬೆಳೆಯುವುದು ಹೆಚ್ಚು, ಏಕೆಂದರೆ ಈ ಪ್ರದೇಶಗಳಲ್ಲಿ ಹೆಚ್ಚು ನೀರು ಪೂರೈಕೆ ಆಗುತ್ತದೆ. ಈ ತಳಿಯ ಭತ್ತದ ಗಿಡ ಸುಮಾರು 7 ಅಡಿಗಳಷ್ಟು ಉದ್ದ ಬೆಳೆಯುತ್ತದೆ. ಈ ಮ್ಯಾಜಿಕ್ ರೈಸ್ ತಯಾರಾಗಲು ಆರು ತಿಂಗಳು ಸುಮಾರು 180 ದಿನಗಳ ಸಮಯ ಬೇಕಾಗುತ್ತದೆ. ಈ ಅಕ್ಕಿಯು ನೋಡಲು ಸ್ವಲ್ಪ ಒರಟು ಎನ್ನಿಸುತ್ತದೆ. ಒಂದು ಕೆಜಿ ಮ್ಯಾಜಿಕ್ ರೈಸ್ ಗೆ 450 ಇಂದ 500 ರೂಪಾಯಿವರೆಗು ಬೆಲೆ ಇರುತ್ತದೆ.

Magic rice techniques to boil rice

Follow us On

FaceBook Google News

Magic rice techniques to boil rice