ಕಾರ್ತಿಕ ಮಾಸದಲ್ಲಿ ಮನೆಗೆ ಕೋಳಿ ಮಾಂಸ ತಂದ ವ್ಯಕ್ತಿ ಕೊಲೆ
ಕಾರ್ತಿಕ ಮಾಸದಲ್ಲಿ ಮನೆಗೆ ಕೋಳಿ ಮಾಂಸ ತಂದ ಸಹೋದರನ ಮೇಲೆ ಅಣ್ಣ-ತಮ್ಮಂದಿರು ಸಿಟ್ಟಿಗೆದ್ದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.
ಭೋಪಾಲ್ (Bhopal): ಈ ಸುದ್ದಿ ನೋಡಿದ ಮೇಲೆ ಇಂತಹ ವಿಚಾರಕ್ಕೂ ಕೊಲೆ ನಡೆಯುತ್ತ ಎಂದು ನೀವು ಶಾಕ್ ಆಗಬಹುದು. ಹೌದು, ಕಾರ್ತಿಕ ಮಾಸದಲ್ಲಿ ಮನೆಗೆ ಕೋಳಿ ಮಾಂಸ (Chicken) ತಂದುಬಿಟ್ಟ ಅಂತ ಸಹೋದರನ ಮೇಲೆ ಮೇಲೆ ಅಣ್ಣ-ತಮ್ಮಂದಿರು (Brothers) ಸಿಟ್ಟಿಗೆದ್ದಿದ್ದಾರೆ.
ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ನಡೆದಿದೆ.
ನವೆಂಬರ್ 9 ರಂದು ಬೈರಾಗರ್ ಪ್ರದೇಶದ ಇಂದಿರಾ ನಗರದಲ್ಲಿ ವಾಸಿಸುತ್ತಿದ್ದ ಕುಟುಂಬದ ಮೂವರು ಸಹೋದರರು ಮದ್ಯ ಸೇವಿಸಿದ್ದರು. 22 ವರ್ಷದ ಅನ್ಶುಲ್ ಯಾದವ್, ಕಿರಿಯ ಸಹೋದರ, ಪಾರ್ಟಿಯಲ್ಲಿ ಚಿಕನ್ ಬೇಕು ಎಂದು ಹಠ ಹಿಡಿದಿದ್ದ, ಆದರೆ ಕಾರ್ತಿಕ ಮಾಸವಾದ್ದರಿಂದ ಅಣ್ಣಂದಿರಾದ ಕುಲದೀಪ್ ಮತ್ತು ಅಮನ್ ತರಬೇಡ ಎಂದು ಹೇಳಿದ್ದಾರೆ.
ಅಷ್ಟರಲ್ಲಿ ಅನ್ಶುಲ್ ಹೊರಗೆ ಹೋಗಿ ಕೋಳಿ ಮಾಂಸ ಖರೀದಿಸಿ ಮನೆಗೆ ತಡೆಬಿಟ್ಟಿದ್ದ. ಇದನ್ನು ನೋಡಿ ಕುಲದೀಪ್ ಮತ್ತು ಅಮಾನ್ ಕೋಪಗೊಂಡಿದ್ದರು. ಈ ವಿಚಾರವಾಗಿ ಅವರ ನಡುವೆ ಜಗಳ ನಡೆದಿದೆ.
ಈ ಸಂದರ್ಭದಲ್ಲಿ ಅನ್ಶುಲ್‌ನ ಕಿರಿಯ ಸಹೋದರನನ್ನು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮತ್ತೊಂದೆಡೆ, ಈ ವಿಷಯ ತಿಳಿದ ಪೊಲೀಸರು ಅನ್ಶುಲ್ ಮೃತ ದೇಹವನ್ನು ಪರೀಕ್ಷೆಗೆ ರವಾನಿಸಿದ್ದಾರೆ. ತಾಯಿ ಅನಿತಾಳನ್ನು ವಿಚಾರಣೆಗೆ ಒಳಪಡಿಸಿದಾಗ ಮೊದ ಮೊದಲು ಯಾವುದೇ ವಿಚಾರ ತಿಳಿಸಿಲ್ಲ, ನಂತರ ಆತನ ಕತ್ತಿಗೆ ಹಗ್ಗದಿಂದ ಬಿಗಿದು ಕೊಲೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ
ಅಲ್ಲದೆ, ಪೋಸ್ಟ್‌ಮಾರ್ಟಂ ವರದಿಯಲ್ಲಿ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯ ಸಾಕ್ಷ್ಯವನ್ನು ಬಚ್ಚಿಟ್ಟ ತಾಯಿಯ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Man Killed By His Brothers For Bringing Chicken Home In Bhopal