ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ತಾಯಿಯನ್ನು ಕೊಂದ ಮಗ

ತಾಯಿ ತನ್ನ ಇಷ್ಟದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಮಗ ಆಕೆಯನ್ನು ಕೊಂದಿದ್ದಾನೆ. ತನಿಖೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹೊಸದಿಲ್ಲಿ: ತನ್ನ ಇಷ್ಟದ ಹುಡುಗಿಯನ್ನು ಮದುವೆಯಾಗಲು ತಾಯಿ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ಮಗ ಆಕೆಯನ್ನು ಕೊಂದಿದ್ದಾನೆ (Man Kills Mother). ತನಿಖೆ ನಡೆಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಶವನ್ ಶುಕ್ರವಾರ ರಾತ್ರಿ ಪೊಲೀಸರಿಗೆ ಕರೆ ಮಾಡಿದ್ದಾನೆ. ತಮ್ಮ ಮನೆಯಲ್ಲಿ ದರೋಡೆ ನಡೆದಿದ್ದು, ಕಳ್ಳರು ತಾಯಿ ಸುಲೋಚನಾ ಅವರ ಕಿವಿಯೋಲೆಗಳನ್ನು ಕದ್ದು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದ.

ಪೊಲೀಸರು ಮನೆಗೆ ಬಂದು ಪರಿಶೀಲಿಸಿದ್ದಾರೆ, ಮನೆಯಲ್ಲಿದ್ದ ಉಳಿದ ವಸ್ತುಗಳು ಹಾಗೇ ಇದ್ದುದರಿಂದ ದರೋಡೆ ನಡೆದಿಲ್ಲ ಎಂದು ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಆಕೆಯ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಕೊನೆಗೆ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ತಾಯಿಯನ್ನು ಕೊಂದ ಮಗ

ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಹುಡುಗಿಯ ಬಗ್ಗೆ ತಾಯಿಗೆ ತಿಳಿಸಿದ್ದ, ಆಕೆಯನ್ನೇ ಮದುವೆಯಾಗುವುದಾಗಿ ತಾಯಿಗೆ ಹೇಳಿದ್ದ. ಆಕೆ ನಿರಾಕರಿಸಿದ್ದು, ಆ ಹುಡುಗಿಯನ್ನು ಮದುವೆಯಾದರೆ ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾನೆ.

ಈ ಹಿನ್ನಲೆಯಲ್ಲಿ ಪ್ಲಾನ್ ಪ್ರಕಾರ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆ ಬಳಿಕ ಕಿವಿಯ ಓಲೆಗಳನ್ನು ತೆಗೆದು ಮುಚ್ಚಿಟ್ಟು ಕಳ್ಳರ ಕೃತ್ಯ ಎಂದು ನಂಬಿಸಲು ಯತ್ನಿಸಿದ್ದಾನೆ..

Man Kills Mother For Objecting To Marriage

Related Stories