ಲವ್ ಬ್ರೇಕ್ ಅಪ್, ಯುವತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ
ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ, ಲವ್ ಬ್ರೇಕ್ ಅಪ್ ಆದ ಕಾರಣ ಮನನೊಂದ ಪ್ರೇಮಿಯಿಂದ ಕೃತ್ಯ. ಇಬ್ಬರಿಗೂ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ..
- ಉತ್ತರಪ್ರದೇಶದ ಮಥುರಾದಲ್ಲಿ ವಿಚಿತ್ರ ಘಟನೆ
- ಪ್ರೇಮ ಸಂಬಂಧ ಮುರಿದ ಬಳಿಕ ಯುವಕನ ಭೀಕರ ಕೃತ್ಯ
- ಗಾಯಾಳು ಯುವತಿಯ ಸ್ಥಿತಿ ಗಂಭೀರ
ಉತ್ತರಪ್ರದೇಶ, ಮಥುರಾ: ಪ್ರೇಮ ಸಂಬಂಧ ಮುರಿದು ಹೋದ ನೋವಿನಿಂದ ಕೋಪಗೊಂಡ ಯುವಕನೊಬ್ಬ ತನ್ನ ವಿವಾಹಿತ ಗೆಳತಿಗೆ ಬೆಂಕಿ ಹಚ್ಚಿದ ಘಟನೆ ಮಥುರಾ ಜಿಲ್ಲೆಯಲ್ಲಿ ನಡೆದಿದೆ.
ಉಮೇಶ್ (28) ಎಂಬ ಯುವಕ, ತನ್ನ ಪ್ರೇಮಿಯಾಗಿದ್ದ ರೇಖ (30) ಮನೆಗೆ ಮಹಿಳೆಯ ವೇಷದಲ್ಲಿ ಹೋಗಿ, ಬಾ ಓಡಿಹೋಗೋಣ ಅಂತ ಪೀಡಿಸಿದ್ದ. ಆದರೆ ರೇಖ ನಿರಾಕರಿಸಿದಾಗ, ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ!
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ತಕ್ಷಣವೇ ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಗಂಭೀರವಾಗಿ ಗಾಯಗೊಂಡ ರೇಖ ಮತ್ತು ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಉಮೇಶ್ ಮತ್ತು ರೇಖ ಸ್ನೇಹಿತರಾಗಿದ್ದು, ಕಳೆದ ವರ್ಷ ಅವರಿಬ್ಬರೂ ಒಟ್ಟಿಗೆ ಪರಾರಿಯಾಗಿದ್ದರು. ಆದರೆ ಈ ಸಂಬಂಧಕ್ಕೆ ಕುಟುಂಬದವರು ಅಡ್ಡಿಪಡಿಸಿದ ಕಾರಣ, ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಇರುವ ರೇಖಳನ್ನು ಪೊಲೀಸರು ಹುಡುಕಿ ಮನೆಗೆ ಕರೆತಂದಿದ್ದರು. ಈ ನಂತರ, ರೇಖ ಉಮೇಶ್‌ಗೆ ದೂರ ಉಳಿಯಲು ನಿರ್ಧರಿಸಿದ್ದಳು, ಈ ನಡುವೆ ಆಕೆಗೆ ಬೇರೊಬ್ಬನ ಜೊತೆಗೆ ವಿವಾಹ ಕೂಡ ಆಗಿತ್ತು.
ಆದರೆ, ಆಕೆಯನ್ನು ಮರೆಯಲು ಸಾಧ್ಯವಿಲ್ಲದ ಉಮೇಶ್, ಮಾರ್ಚ್ 11ರಂದು ಮಹಿಳೆಯ ವೇಷದಲ್ಲಿ ಬಂದು ರೇಖನ ಮನೆಯೊಳಗೆ ಪ್ರವೇಶಿಸಿದ್ದ. ಮನೆಯಲ್ಲಿದ್ದದ್ದು ಆಕೆ ಒಬ್ಬಳೇ ಎಂಬ ಮಾಹಿತಿ ಪಡೆದಿದ್ದ ಆತ, ಬಲವಂತವಾಗಿ ತನ್ನೊಂದಿಗೆ ಬರಲು ಪೀಡಿಸಿದ್ದ. ನಿರಾಕರಿಸಿದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಬಳಿಕ ತಾನು ಛಾವಣಿ (Terrace) ಮೇಲೆ ಏರಿ ಅಲ್ಲಿಂದ ಜಿಗಿಯಲು ಯತ್ನಿಸಿದ್ದಾನೆ.
ಮನೆಯೊಳಗಿಂದ ಅರಚಿಕೊಂಡು ಬಂದ ರೇಖ ಕಿರುಚಾಟ ಕೇಳಿದ ನೆರೆಹೊರೆಯವರು ತಕ್ಷಣ ಬಂದಿದ್ದಾರೆ. ಬೆಂಕಿಯನ್ನು ನಂದಿಸಿದ್ದಾರೆ. ಆದರೆ ತೀವ್ರ ಗಾಯಗಳಾದ ಕಾರಣ, ರೇಖನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಉಮೇಶ್ ಕೂಡ ಛಾವಣಿ ಮೇಲಿಂದ ಜಿಗಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾನೆ.
ಈ ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಇಬ್ಬರೂ ಚೇತರಿಸಿಕೊಂಡ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Man Sets Married Lover on Fire
Our Whatsapp Channel is Live Now 👇