Bharat Bandh: ದೇಶವ್ಯಾಪಿ ಭಾರತ್ ಬಂದ್ ಘೋಷಣೆ! ಶಾಲಾ ಕಾಲೇಜುಗಳಿಗೆ ರಜೆ ಇದ್ಯಾ
Bharat Bandh Today: ಕೇಂದ್ರ ಸರ್ಕಾರದ ಕಾರ್ಮಿಕ ಕಾಯ್ದೆಗಳು ಮತ್ತು ವಾಣಿಜ್ಯ ಒಪ್ಪಂದಗಳ ವಿರುದ್ಧ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಇಂದು ದೇಶವ್ಯಾಪಿ ಭಾರತ್ ಬಂದ್‌ಗೆ ಕರೆ ನೀಡಿವೆ. ಸುಮಾರು 30 ಕೋಟಿ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

- ಭಾರತ್ ಬಂದ್‌ಗೆ ಕೇಂದ್ರ ಕಾರ್ಮಿಕ ಸಂಘಟನೆಗಳ ಬೆಂಬಲ
- ರೈತ–ಕಾರ್ಮಿಕರ ಸಮಗ್ರ ಮುಷ್ಕರ, ಪರಿಣಾಮ ಸಾಧ್ಯತೆ
- ಕೇಂದ್ರ ಕಾರ್ಮಿಕ ಕಾಯ್ದೆ ವಿರೋಧಿಸಿ ಪ್ರತಿಭಟನೆ
Bharat Bandh Today: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾರ್ಮಿಕ ಕಾಯ್ದೆಗಳು ಮತ್ತು ಭಾರತ–ಅಮೆರಿಕಾ ವಾಣಿಜ್ಯ ಒಪ್ಪಂದಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುವ ಕಾರ್ಮಿಕ ಹಾಗೂ ರೈತ ಸಂಘಟನೆಗಳು ದೇಶವ್ಯಾಪಿ ಮುಷ್ಕರಕ್ಕೆ ಮುಂದಾಗಿವೆ. ಸರ್ಕಾರದ ನೀತಿಗಳು ಕಾರ್ಮಿಕರು ಮತ್ತು ರೈತರಿಗೆ ವಿರುದ್ಧವಾಗಿದ್ದು, ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಲಾಭಕರವಾಗಿವೆ ಎಂಬ ಆರೋಪ ಕೇಳಿಬಂದಿದೆ.
30 ಕೋಟಿ ಜನರ ಭಾಗವಹಿಸುವಿಕೆ ನಿರೀಕ್ಷೆ
ಸಂಘಟನೆಗಳ ಅಂದಾಜು ಪ್ರಕಾರ, ಸುಮಾರು 600ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಬಂದ್ ಪರಿಣಾಮ ಬೀರುವ ಸಾಧ್ಯತೆ ಇದೆ. ಕೈಗಾರಿಕೆ, ಬ್ಯಾಂಕಿಂಗ್, ಸಾರಿಗೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಆಟೋ, ಬಸ್, ಲಾರಿ ಚಾಲಕರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.
ಯಾವ ಸೇವೆಗಳು ತೆರೆದಿರುತ್ತವೆ?
ಅತ್ಯಾವಶ್ಯಕ ಸೇವೆಗಳಾದ ಆಸ್ಪತ್ರೆಗಳು, ಆಂಬ್ಯುಲೆನ್ಸ್, ಔಷಧ ಅಂಗಡಿಗಳು, ಹಾಲು, ಪತ್ರಿಕೆ ವಿತರಣಾ ಸೇವೆಗಳು, ಅಗ್ನಿಶಾಮಕ ಕೇಂದ್ರಗಳು, ವಿಮಾನ ಸೇವೆಗಳು ಮತ್ತು ಎಟಿಎಂಗಳು ಕಾರ್ಯನಿರ್ವಹಿಸಲಿವೆ. ಆದರೆ ಸಾರಿಗೆ ತೊಂದರೆ ಹಿನ್ನೆಲೆ ಅನೇಕ ಕಡೆ ಶಾಲೆ–ಕಾಲೇಜುಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆ ಇದೆ.
ಪ್ರಮುಖ ಬೇಡಿಕೆಗಳು
ಹೊಸ ಲೇಬರ್ ಕೋಡ್‌ಗಳನ್ನು ಹಿಂತೆಗೆದುಕೊಳ್ಳುವುದು, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಬೀಜ ಕಾಯ್ದೆ ರದ್ದುಪಡಿಸುವುದು, ಉದ್ಯೋಗ ಖಾತರಿ ಯೋಜನೆ ಬಲಪಡಿಸುವುದು, ಹಾಗೂ ವಾಣಿಜ್ಯ ಒಪ್ಪಂದದಲ್ಲಿ ಕೃಷಿ ಉತ್ಪನ್ನಗಳನ್ನು ಹೊರಗಿಡುವುದು ರೈತರ ಮುಖ್ಯ ಬೇಡಿಕೆಗಳಾಗಿವೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಒಟ್ಟಿನಲ್ಲಿ, ದೇಶದಾದ್ಯಂತ ನಡೆಯುತ್ತಿರುವ ಈ ಬಂದ್ ಸಾಮಾನ್ಯ ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.



