Nepal plane crash: ನೇಪಾಳ ವಿಮಾನ ಪತನ, 40 ಮಂದಿ ಸಾವು
Nepal plane crash: ನೇಪಾಳದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 72 ಮಂದಿ ಸಾವನ್ನಪ್ಪಿದ್ದಾರೆ.ಮೃತರಲ್ಲಿ ಐವರು ಭಾರತೀಯರು
ಕಠ್ಮಂಡು: ನೇಪಾಳ ವಿಮಾನ ಪತನ (Nepal plane crash), ನೇಪಾಳದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (Nepal Aircraft Crash) 40 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಐವರು ಭಾರತೀಯರು.
ಯೇತಿ ಏರ್ಲೈನ್ಸ್ಗೆ ಸೇರಿದ 72 ಆಸನಗಳ ವಿಮಾನವು ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pokhara Airport) ಲ್ಯಾಂಡಿಂಗ್ ಮಾಡುವಾಗ ಪತನಗೊಂಡು ಈ ಅವಘಡ ಸಂಭವಿಸಿದೆ. ಅಪಘಾತದ ಸಮಯದಲ್ಲಿ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ವಿಮಾನ ಪತನಗೊಂಡ ತಕ್ಷಣ, ಭಾರೀ ಬೆಂಕಿ ಕಾಣಿಸಿಕೊಂಡಿತು ಮತ್ತು ವಿಮಾನದಲ್ಲಿದ್ದವರೆಲ್ಲರೂ ಬೆಂಕಿಯಲ್ಲಿ ಪ್ರಾಣ ಕಳೆದುಕೊಂಡರು.
ಇಂದಿನ ಕನ್ನಡ ನ್ಯೂಸ್ ಲೈವ್ ನವೀಕರಣಗಳು 15 01 2023
ನೇಪಾಳ ವಿಮಾನ ಪತನ – ವಿಮಾನ ಅಪಘಾತದಲ್ಲಿ 30 ಮೃತದೇಹಗಳು ಪತ್ತೆ
ಮೃತರಲ್ಲಿ 53 ನೇಪಾಳಿಗಳು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ಕೊರಿಯನ್ನರು, ಐರ್ಲೆಂಡ್ನ ಇಬ್ಬರು, ಅಫ್ಘಾನಿಸ್ತಾನ ಮತ್ತು ಫ್ರಾನ್ಸ್ನ ತಲಾ ಒಬ್ಬರು ಇಬ್ಬರು ಶಿಶುಗಳು ಸೇರಿದಂತೆ. ಅಪಘಾತ ಸಂಭವಿಸಿದ ತಕ್ಷಣ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. ನೇಪಾಳ ರಕ್ಷಣಾ ತಂಡಗಳು ಕ್ಷೇತ್ರಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಪರಿಹಾರ ಕಾರ್ಯಗಳು ಇನ್ನೂ ನಡೆಯುತ್ತಿವೆ. ಇದುವರೆಗೆ ಒಟ್ಟು 30 ಮೃತದೇಹಗಳು ಪತ್ತೆಯಾಗಿವೆ.
Nepal plane Crash 30 Bodies Have Been Recovered So Far
#WATCH | A passenger aircraft crashed at Pokhara International Airport in Nepal today. 68 passengers and four crew members were onboard at the time of crash. Details awaited. pic.twitter.com/DBDbTtTxNc
— ANI (@ANI) January 15, 2023
ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pokhara International Airport) ವಿಮಾನವೊಂದು ರನ್ ವೇ ಮೇಲೆ ಪತನಗೊಂಡಿದೆ. ಆ ಸಮಯದಲ್ಲಿ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತು. ರಕ್ಷಣಾ ತಂಡಗಳು ಕೆಲ ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನಗಳು ಮಾರ್ಗ ಬದಲಿಸುವ ಸಾಧ್ಯತೆ ಇದೆ. ಪತನಗೊಂಡ ವಿಮಾನವು ಯತಿ ಏರ್ಲೈನ್ಸ್ಗೆ ಸೇರಿದ ಎಟಿಆರ್ 72 ವಿಮಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಠ್ಮಂಡುವಿನಿಂದ ಪೋಖರಾಗೆ ಬಂದಾಗ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ವಿಮಾನದಿಂದ ದೊಡ್ಡ ಪ್ರಮಾಣದಲ್ಲಿ ಬೆಂಕಿ ಮತ್ತು ಹೊಗೆ ಬರುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯ ಸಹಾಯದಿಂದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಈ ವಿಮಾನ ಅಪಘಾತದ ಸಂಪೂರ್ಣ ವಿವರಗಳು ಇನ್ನಷ್ಟೇ ಸಿಗಬೇಕಿದೆ.