ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು! ಕಾರಣ ಏನು ಗೊತ್ತಾ

ಭೋಪಾಲ್‌ ಭಿಂಡ್‌ ಗಾಂಧೀನಗರದಲ್ಲಿ ಹಳೆಯ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಳಾಗಿದ್ದು, 15 ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಿಸಿದ ಗ್ರಾಮಸ್ಥರು ಹೊಸ ಟ್ರಾನ್ಸ್‌ಫಾರ್ಮರ್‌ಗೆ ಪೂಜೆ ಸಲ್ಲಿಸಿದರು.

  • ಹಳೆ ಟ್ರಾನ್ಸ್‌ಫಾರ್ಮರ್ ಹಾಳಾಗಿ 15 ದಿನ ವಿದ್ಯುತ್ ಸ್ಥಗಿತ.
  • ಸ್ಥಳೀಯರ ದೂರು ನಂತರ ವಿದ್ಯುತ್ ಇಲಾಖೆಯ ಹೊಸ ವ್ಯವಸ್ಥೆ.
  • ಹೊಸ ಟ್ರಾನ್ಸ್‌ಫಾರ್ಮರ್‌ಗೆ ಪೂಜೆ, ಹಾರತಿ ಹಾಗೂ ಸಿಹಿ ವಿತರಣೆ.

ಭೋಪಾಲ್: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿ ಕಳೆದ ಕೆಲವು ದಿನಗಳಿಂದ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದರು. ಕೊನೆಗೆ, ವಿದ್ಯುತ್ ಸಿಬ್ಬಂದಿ ಹೊಸ ಟ್ರಾನ್ಸ್‌ಫಾರ್ಮರ್ ಅನ್ನು ಸ್ಥಾಪಿಸಿದರು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೂತನ ಟ್ರಾನ್ಸ್‌ಫಾರ್ಮರ್‌ಗೆ ಪೂಜೆ ಸಲ್ಲಿಸಿದರು. ಈ ಘಟನೆ ನಡೆದಿರುವುದು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ. ಭಿಂಡ್‌ನ ಗಾಂಧಿ ನಗರ ಪ್ರದೇಶದಲ್ಲಿ ಇತ್ತೀಚೆಗೆ 15 ವರ್ಷ ಹಳೆಯ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹೊತ್ತಿಕೊಂಡಿತ್ತು.

ಇದರಿಂದಾಗಿ ಕಳೆದ 15 ದಿನಗಳಿಂದ ಸುಡು ಬೇಸಿಗೆಯಲ್ಲಿ ವಿದ್ಯುತ್ ಸರಬರಾಜು ಇಲ್ಲದೆ ಗ್ರಾಮಸ್ಥರು ಸಂಕಷ್ಟ ಅನುಭವಿಸಿದ್ದರು.

ಈ ಮಧ್ಯೆ, ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ವಿದ್ಯುತ್ ಸಿಬ್ಬಂದಿ ತೋರಿದ ನಿರಾಸಕ್ತಿಯಿಂದ ಗ್ರಾಮಸ್ಥರು ಬೇಸತ್ತಿದ್ದರು. ಕೊನೆಗೆ ಅವರು ಸ್ಥಳೀಯ ಶಾಸಕರಿಗೆ ದೂರು ನೀಡಿದರು. ಈ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯು ಆ ಪ್ರದೇಶದಲ್ಲಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಿದೆ.

ಕಳೆದ ಕೆಲವು ದಿನಗಳಿಂದ ವಿದ್ಯುತ್ ಇಲ್ಲದೆ ಕಷ್ಟಪಡುತ್ತಿದ್ದ ಸ್ಥಳೀಯರು ಇದನ್ನು ಹಬ್ಬದಂತೆ ಆಚರಿಸಿದರು. ಅವರು ಹೊಸ ಟ್ರಾನ್ಸ್‌ಫಾರ್ಮರ್‌ಗೆ ಪೂಜೆ ಮತ್ತು ಆರತಿ ಸಲ್ಲಿಸಿದರು. ಸ್ಥಳೀಯರಿಗೆ ಸಿಹಿ ಹಂಚಲಾಯಿತು. ಹೊಸ ಟ್ರಾನ್ಸ್‌ಫಾರ್ಮರ್ ದೀರ್ಘಕಾಲ ಕೆಲಸ ಮಾಡಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.

ಮತ್ತೊಂದೆಡೆ, ಟ್ರಾನ್ಸ್‌ಫಾರ್ಮರ್ ಸುಟ್ಟುಹೋದರೆ, ಅದನ್ನು ಬದಲಾಯಿಸಲು 15 ದಿನಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ವಿದ್ಯುತ್ ಕಚೇರಿಯ ಸುತ್ತಲೂ ಅಲೆಯಬೇಕಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಹೊಸ ಟ್ರಾನ್ಸ್‌ಫಾರ್ಮರ್ ಹಲವು ವರ್ಷಗಳ ಕಾಲ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲು ಪೂಜೆ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ

New Electric Transformer Installed Amid Power Outage

 

English Summary▼

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories