India News

ಬಿಜೆಪಿ ಮುಖಂಡನಿಗೆ ವಂಚಿಸಿದ ನವವಧು ಲಕ್ಷಗಟ್ಟಲೆ ಹಣದೊಂದಿಗೆ ಪರಾರಿ

ಪಾಟ್ನಾ: ಬಿಜೆಪಿ ನಾಯಕನಿಗೆ ನವ ವಧು ವಂಚನೆ ಮಾಡಿ, ಆತನನ್ನು ಮದುವೆಯಾಗಿ ಲಕ್ಷಗಟ್ಟಲೆ ಹಣ ಪಡೆದು ಓಡಿ ಹೋಗಿದ್ದಾಳೆ. ಮಹಿಳೆಗೆ ಇನ್ನೊಬ್ಬ ಗಂಡನಿದ್ದಾನೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.

ಕಾಣೆಯಾದ ವಧುವಿನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಘಟನೆ ಬಿಹಾರದ ಕಿಶನ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಧರಮ್‌ಗಂಜ್ ಗ್ರಾಮದ ಬಿಜೆಪಿ ಯುವ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಗುಪ್ತಾ ಇತ್ತೀಚೆಗೆ ಇಶಿಕಾ ಎಂಬ ಮಹಿಳೆಯನ್ನು ವಿವಾಹವಾದರು.

ಬಿಜೆಪಿ ಮುಖಂಡನಿಗೆ ವಂಚಿಸಿದ ನವವಧು ಲಕ್ಷಗಟ್ಟಲೆ ಹಣದೊಂದಿಗೆ ಪರಾರಿ

ದೇವಸ್ಥಾನದಲ್ಲಿ ಮದುವೆಯಾದ ನಂತರ ದಂಪತಿ ಅದ್ಧೂರಿಯಾಗಿ ಆರತಕ್ಷತೆ ಏರ್ಪಡಿಸಿದ್ದರು. ಆದರೆ ನವವಿವಾಹಿತೆ ಬಂಗಾಳದಲ್ಲಿರುವ ತನ್ನ ತವರು ಮನೆಗೆ ಹೋಗಿ ನಂತರ ನಾಪತ್ತೆಯಾಗಿದ್ದಳು.

ಸಿಎಂ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ರಾಂಗ್ ರೂಟ್ ನಲ್ಲಿ ಬಂದ ಕಾರು

ಮಹಿಳೆ ಪದೇ ಪದೇ ಹಣ ಕೇಳುತ್ತಿದ್ದಳು. ಜಮೀನು ಹಾಗೂ 30 ಲಕ್ಷ ರೂ.ಗೂ ಹೆಚ್ಚು ನಗದು ನೀಡಿರುವುದಾಗಿ ತಿಳಿದುಬಂದಿದೆ. ಆ ಹಣದಿಂದ ಆಕೆ ಓಡಿಹೋಗಲು ಆಕೆಯ ತಾಯಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದೆಡೆ, ಇಶಿಕಾ ಪೋಷಕರು ರಾಕೇಶ್ ಗುಪ್ತಾ ಆರೋಪವನ್ನು ನಿರಾಕರಿಸಿದ್ದಾರೆ. ಅವರು ಮದುವೆಯಾಗಿಲ್ಲ ಎಂದು ಆಶ್ಚರ್ಯಕರ ಹೇಳಿಕೆ ಕೊಟ್ಟಿದ್ದಾರೆ. ಡಿಸೆಂಬರ್ 6ರಂದು ನಿಶ್ಚಿತಾರ್ಥ ಮಾತ್ರ ನಡೆದಿದೆ ಎಂದು ಹೇಳಿದ್ದಾರೆ.

ಆದರೆ ಪೊಲೀಸರು ಎರಡೂ ಕುಟುಂಬದವರನ್ನು ಠಾಣೆಗೆ ಕರೆ ತಂದಿದ್ದಾರೆ. ಈ ಸಂದರ್ಭ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಏತನ್ಮಧ್ಯೆ, ರಾಕೇಶ್ ಗುಪ್ತಾ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Newlywed Bride Cheats Man Of Lakhs In Bihar

English Summary

Our Whatsapp Channel is Live Now 👇

Whatsapp Channel

Related Stories