ಪಹಲ್ಗಾಂ ಉಗ್ರದಾಳಿ: 26 ಅಮಾಯಕ ನಾಗರಿಕರ ಸಾವು, ಎನ್‌ಐಎ ಚಾರ್ಜಿಷೀಟ್ ಸಲ್ಲಿಕೆ
ಪಹಲ್ಗಾಂನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರದಾಳಿಯಲ್ಲಿ 26 ನಾಗರಿಕರ ಸಾವು ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಏಳು ಆರೋಪಿಗಳು ಐದು ಶಂಕಿತರು ಮತ್ತು ಲಷ್ಕರೆ, ಟಿಆರ್‌ಎಫ್ ವಿರುದ್ಧ ಚಾರ್ಜಿಷೀಟ್ ಸಲ್ಲಿಸಿದೆ
- ಪಹಲ್ಗಾಂ ಉಗ್ರದಾಳಿ: 26 ನಾಗರಿಕರ ಸಾವು
- ಎನ್‌ಐಎ ಚಾರ್ಜಿಷೀಟ್: 7 ಆರೋಪಿಗಳು ಗುರುತು
- ಲಷ್ಕರೆ–ಟಿಆರ್‌ಎಫ್: ಸಂಚಿನ ಆರೋಪ
ಜಮ್ಮು–ಕಾಶ್ಮೀರದ ಪಹಲ್ಗಾಂನಲ್ಲಿ ಈ ವರ್ಷ ಏಪ್ರಿಲ್ 22ರಂದು ನಡೆದ ಭೀಕರ ಉಗ್ರದಾಳಿಯ (Pahalgam Terror Attack Case) ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 26 ಅಮಾಯಕ ನಾಗರಿಕರ ಪ್ರಾಣ ತೆಗೆದ ಈ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಚಾರ್ಜಿಷೀಟ್ ಸಲ್ಲಿಸಿದೆ.
ಏಳು ಆರೋಪಿಗಳು, ಐದು ಶಂಕಿತರು
ಎನ್‌ಐಎ ಸಲ್ಲಿಸಿದ ಚಾರ್ಜಿಷೀಟ್‌ನಲ್ಲಿ ಏಳು ಆರೋಪಿಗಳು ಹಾಗೂ ಐದು ಶಂಕಿತ ವ್ಯಕ್ತಿಗಳನ್ನು ಉಲ್ಲೇಖಿಸಲಾಗಿದೆ. ಈ ಪೈಕಿ ಲಷ್ಕರೆ ತಯಿಬಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಕೂಡ ಸೇರಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದಟ್ಟ ಮಂಜು ಎಫೆಕ್ಟ್: ಘನ ಘೋರ ಅಪಘಾತ! ಬೆಂಕಿ ಹೊತ್ತಿಕೊಂಡು ನಾಲ್ವರು ಸಾವು
ಲಷ್ಕರೆ ಮತ್ತು ಟಿಆರ್‌ಎಫ್ ಪಾತ್ರ ಸ್ಪಷ್ಟ
ಈ ಉಗ್ರದಾಳಿಯ ಹಿಂದೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರೆ ತಯಿಬಾ (LeT) ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನೇರ ಪಾತ್ರವಿದೆ ಎಂದು ಎನ್‌ಐಎ ತನ್ನ ದಾಖಲೆಗಳಲ್ಲಿ ಸ್ಪಷ್ಟಪಡಿಸಿದೆ. ದಾಳಿ ರೂಪುರೇಷೆ, ಹಣಕಾಸು ನೆರವು ಮತ್ತು ಲಾಜಿಸ್ಟಿಕ್ ಬೆಂಬಲದ ವಿವರಗಳನ್ನು ಚಾರ್ಜಿಷೀಟ್ ಒಳಗೊಂಡಿದೆ.
ಪಹಲ್ಗಾಂ ದಾಳಿಯ ಪ್ರಮುಖ ಸೂತ್ರಧಾರಿಯಾಗಿ ಲಷ್ಕರ್‌ನ ಟಾಪ್ ಕಮಾಂಡರ್ ಸಾಜಿದ್ ಜಟ್ ಹೆಸರು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಈತನ ಮಾರ್ಗದರ್ಶನದಲ್ಲೇ ದಾಳಿ ಯೋಜನೆ ರೂಪಗೊಂಡಿದೆ ಎಂದು ತನಿಖೆ ತಿಳಿಸಿದೆ.
ಜುಲೈ ತಿಂಗಳಲ್ಲಿ ಶ್ರೀನಗರ ಸಮೀಪ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತರಾದ ಪಾಕಿಸ್ತಾನಿ ಉಗ್ರರ ಪಾತ್ರವನ್ನೂ ಎನ್‌ಐಎ ತನ್ನ 1,597 ಪುಟಗಳ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆಯ ದಿನ ಭವಿಷ್ಯ 05-11-2026, ಗುರುವಾರ
Read the story
ಕೆಎಸ್ಆರ್ಟಿಸಿ ಉಚಿತ ಚಾಲನಾ ತರಬೇತಿ! ಡ್ರೈವಿಂಗ್ ಕಲಿಯಲು, ಲೈಸೆನ್ಸ್ ಪಡೆಯಲು ಅವಕಾಶ
Read the story
ಬಸ್ ಟಿಕೆಟ್ ದರ ಏರಿಕೆ ಕುರಿತು ಸಾರಿಗೆ ಸಚಿವ ಬೈರತಿ ಸುರೇಶ್ ಸ್ಪಷ್ಟನೆ; ಹೇಳಿದ್ದೇನು ಗೊತ್ತಾ?
Read the story
ಜಿಯೋ ಗ್ರಾಹಕರಿಗೆ ಸಿಹಿಸುದ್ದಿ: ₹200ಕ್ಕಿಂತ ಕಡಿಮೆ ಬೆಲೆಗೆ 4 ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ
Read the story



