ಪಿಎಂ ಕಿಸಾನ್ ಯೋಜನೆ ನೆರವು ಹೆಚ್ಚಿಸುವ ಯೋಜನೆ ಇಲ್ಲ, ಕೇಂದ್ರ ಸ್ಪಷ್ಟನೆ
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ನೆರವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
Pm Kisan Yojana : ಪ್ರಧಾನ ಮಂತ್ರಿ ಕಿಸಾನ್ ಯೋಜನೆ ನೆರವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರವು ಪ್ರತಿ ವರ್ಷ ರೈತರಿಗೆ ತಲಾ ರೂ.2 ಸಾವಿರದಂತೆ ಮೂರು ಕಂತುಗಳಲ್ಲಿ ರೂ.6 ಸಾವಿರ ನೀಡುತ್ತದೆ. ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಚಿವರು, ಈ ಯೋಜನೆಯಡಿ ಇದುವರೆಗೆ 18 ಕಂತುಗಳಲ್ಲಿ ರೈತರಿಗೆ 3.46 ಲಕ್ಷ ಕೋಟಿ ರೂ. ನೀಡಲಾಗಿದೆ. ಈ ಮೊತ್ತವನ್ನು ಮಧ್ಯವರ್ತಿಗಳ ಕೈವಾಡವಿಲ್ಲದೇ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.
ಹಾಗೂ ನೆರವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೃಷಿ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಹೇಳಿದ್ದಾರೆ.
No Proposal To Hike Benefit Amount Under Pm Kisan Yojana